Police Roundup

ಪೊಲೀಸ್ ರೌಂಡಪ್ ಮಾಧ್ಯಮ :

ನಮಸ್ಕಾರ ಸ್ನೇಹಿತರೇ 🙏ನಮ್ಮ ಮೂರುದಶಕದ ಪತ್ರಿಕಾ ವೃತ್ತಿಯ ಅನುಭವದೊಂದಿಗೆ ” ನಿರ್ಭೀತ ಸಮಾಜಕ್ಕಾಗಿ ” ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆಗಾಗಿ ಆರಂಬಿಸಿದ https://policeroundup.in/ಅಂತರ್ಜಾಲ ಮಾಧ್ಯಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.

ಯಾವದೇ ಪಕ್ಷಪಾತವಿಲ್ಲದೆ, ಯಾವುದೇ ದೋಷಾರೋಪಣೆಯ ಲೇಪನವನ್ನು ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತ, ಎಲ್ಲರೂ ಸಮಾನರು ಎನ್ನುತ್ತ, ಯಾರೊಂದಿಗೂ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲದೆ. ತಪ್ಪು ಮಾಡುವ ವ್ಯಕ್ತಿಯನ್ನು/ವ್ಯವಸ್ಥೆಯನ್ನು ನಿರ್ಭಯವಾಗಿ ಟೀಕಿಸುತ್ತ. ಒಳ್ಳೆಯದನ್ನು ಗೌರವಿಸುತ್ತ, ಓದುಗರಿಗೆ ನ್ಯಾಯೋಚಿತ ಸುದ್ದಿಗಳನ್ನು ಜವಾಬ್ದಾರಿಯುತವಾಗಿ ಕೊಡುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ.

ಡಿಜಿಟಲ್ ಮಾಧ್ಯಮದಲ್ಲಿ ಅಂತರ್ಜಾಲ ಪತ್ರಿಕೆ ಅಥವಾ ವೆಬ್ ಸೈಟ್ (ನ್ಯೂಸ್ ಪೋರ್ಟಲ್) ಗೆ ಮೊದಲ ಆದ್ಯತೆ ನೀಡಿದ್ದು ವಿಶೇಷ ಅಂದಾಗ ಮಾತ್ರ youtube ಯೂಟ್ಯೂಬ್ ದೃಶ್ಯಮಾಧ್ಯಮದಲ್ಲಿ ಸುದ್ದಿ ಮುಟ್ಟಿಸುವಂತಹ ಪ್ರಯತ್ನ ಮಾಡುತ್ತೇವೆ. ಇದರೊಂದಿಗೆ “ಪೊಲೀಸ್ ರೌಂಡಪ್” ಕನ್ನಡ ಮಾಸಿಕ ಪತ್ರಿಕೆಯನ್ನು ಹೊರತರಲಾಗಿದೆ, ಬರುವಂತ ದಿನಗಳಲ್ಲಿ ಓದುಗರ, ಕೇಳುಗರ ಹಾಗೆ ನೋಡುಗರ ನಿರೀಕ್ಷೆಗಳನ್ನು ಪೂರೈಸಲು ಮೊಬೈಲ್ ಆಪ್ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಸದಾಕಾಲ ಓದುಗರ ಸಹಕಾರ ಆಶಿಸುತ್ತ ಸ್ವತಂತ್ರ ಪತ್ರಿಕೋದ್ಯಮವನ್ನು ಬೆಂಬಲಿಸುವಂತೆ ನಿಮ್ಮನ್ನು ಸದಾ ಕೋರುತ್ತೇವೆ.

_ ಪೊಲೀಸ್ ರೌಂಡಪ್ ಡಿಜಿಟಲ್ ಮಾಧ್ಯಮ ಬಳಗ

Solverwp- WordPress Theme and Plugin