Skip to main content

Police Roundup

ನಮ್ಮ ಬಗ್ಗೆ — ABOUT US

POLICE ROUNDUP DIGITAL MEDIA

POLICE ROUNDUP DIGITAL MEDIA ಒಂದು ಸ್ವತಂತ್ರ ಡಿಜಿಟಲ್ ಮಾಧ್ಯಮ ಸಂಸ್ಥೆಯಾಗಿದ್ದು, ಸಾರ್ವಜನಿಕ ಹಿತಾಸಕ್ತಿ, ಕಾನೂನು ಮತ್ತು ಸುವ್ಯವಸ್ಥೆ, ಅಪರಾಧ, ಆಡಳಿತ, ಭ್ರಷ್ಟಾಚಾರ, ಸಾಮಾಜಿಕ ಸಮಸ್ಯೆಗಳು ಹಾಗೂ ಜನಸಾಮಾನ್ಯರಿಗೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳ ಕುರಿತು ಸುದ್ದಿ, ವಿಶ್ಲೇಷಣೆ ಮತ್ತು ತನಿಖಾತ್ಮಕ ವರದಿಗಳನ್ನು ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಕಟಿಸುವ ಉದ್ದೇಶ ಹೊಂದಿದೆ.

ನಮ್ಮ ಪತ್ರಿಕೋದ್ಯಮದ ಪ್ರಮುಖ ಉದ್ದೇಶ ವಾಸ್ತವಾಂಶ, ದಾಖಲೆ, ಸಾರ್ವಜನಿಕ ಹಿತಾಸಕ್ತಿ ಮತ್ತು ಜವಾಬ್ದಾರಿಯುತ ವರದಿಗಾರಿಕೆಗೆ ಆದ್ಯತೆ ನೀಡುವುದಾಗಿದೆ.

ಸಾರ್ವಜನಿಕ ದಾಖಲೆಗಳು, ನ್ಯಾಯಾಲಯದ ದಾಖಲೆಗಳು, ಸರ್ಕಾರಿ ದಾಖಲೆಗಳು, ಅಧಿಕೃತ ಪ್ರಕಟಣೆಗಳು, FIR, ಅಧಿಕೃತ ಹೇಳಿಕೆಗಳು ಹಾಗೂ ಲಭ್ಯವಿರುವ ಇತರ ವಿಶ್ವಾಸಾರ್ಹ ಮೂಲಗಳನ್ನು ಪರಿಶೀಲಿಸಿ ವರದಿ ಮಾಡಲು ನಾವು ಪ್ರಯತ್ನಿಸುತ್ತೇವೆ.

ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ವಿರುದ್ಧದ ಆರೋಪವನ್ನು ಅಂತಿಮ ಸತ್ಯವೆಂದು ಪರಿಗಣಿಸದೆ, ಪ್ರಕರಣದ ಕಾನೂನು ಸ್ಥಿತಿ ಮತ್ತು ಸಂಬಂಧಪಟ್ಟ ವ್ಯಕ್ತಿ ಅಥವಾ ಸಂಸ್ಥೆಯ ಪ್ರತಿಕ್ರಿಯೆಯನ್ನು ಸಾಧ್ಯವಾದಷ್ಟು ಸಮತೋಲನದಿಂದ ಪ್ರಕಟಿಸುವುದು ನಮ್ಮ ಸಂಪಾದಕೀಯ ಬದ್ಧತೆಯಾಗಿದೆ.

ನಮ್ಮ ಉದ್ದೇಶ

  1. ಸಾರ್ವಜನಿಕ ಹಿತಾಸಕ್ತಿಯ ಸುದ್ದಿಗಳನ್ನು ಜನರಿಗೆ ತಲುಪಿಸುವುದು.
  2. ದಾಖಲೆ ಆಧಾರಿತ ಪತ್ರಿಕೋದ್ಯಮಕ್ಕೆ ಆದ್ಯತೆ ನೀಡುವುದು.
  3. ತನಿಖಾತ್ಮಕ ಪತ್ರಿಕೋದ್ಯಮದ ಮೂಲಕ ಸಾರ್ವಜನಿಕ ಪ್ರಶ್ನೆಗಳನ್ನು ಎತ್ತುವುದು.
  4. ಜನರ ಸಮಸ್ಯೆಗಳಿಗೆ ಮಾಧ್ಯಮದ ಮೂಲಕ ಧ್ವನಿ ನೀಡುವುದು.
  5. ಸುದ್ದಿಯಲ್ಲಿ ಸಂಬಂಧಪಟ್ಟವರ ಪ್ರತಿಕ್ರಿಯೆಗೆ ಸೂಕ್ತ ಅವಕಾಶ ನೀಡುವುದು.
  6. ವಾಸ್ತವಿಕ ತಪ್ಪು ಕಂಡುಬಂದಲ್ಲಿ ಪರಿಶೀಲನೆಯ ನಂತರ ಸೂಕ್ತ ತಿದ್ದುಪಡಿ ಮಾಡುವುದು.

ಸಂಸ್ಥೆಯ ನೋಂದಣಿ ವಿವರ :

Enterprise Name: POLICE ROUNDUP DIGITAL MEDIA
Organisation Type: Proprietary
Enterprise Type: Micro
Udyam Registration No.: UDYAM-KR-03-0520192
State: Karnataka
District: Bengaluru Urban

ನಮ್ಮ Udyam ನೋಂದಣಿಯಲ್ಲಿ Web Portal ಹಾಗೂ News Agency Activities ಸೇರಿದಂತೆ ಸಂಬಂಧಿತ Information Service ಚಟುವಟಿಕೆಗಳು ದಾಖಲಾಗಿವೆ.

From Editors Desk :

_ತ್ಯಾಗರಾಜ್ ವಿ.ಎಸ್.

(Editor In Chief)

ಪೊಲೀಸ್ ರೌಂಡಪ್ ಡಿಜಿಟಲ್ ಮಾಧ್ಯಮ ಬಳಗ

ನಮಸ್ಕಾರ ಸ್ನೇಹಿತರೇ 🙏

 

ನಮ್ಮ ಮೂರುದಶಕದ ಪತ್ರಿಕಾ ವೃತ್ತಿಯ ಅನುಭವದೊಂದಿಗೆ ” ನಿರ್ಭೀತ ಸಮಾಜಕ್ಕಾಗಿ ” ಕಾನೂನು ಮತ್ತು ಸುವ್ಯವಸ್ಥೆ ಪರಿಪಾಲನೆಗಾಗಿ ಆರಂಬಿಸಿದ https://policeroundup.in/ಅಂತರ್ಜಾಲ ಮಾಧ್ಯಮವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದೇವೆ.

 

ಯಾವದೇ ಪಕ್ಷಪಾತವಿಲ್ಲದೆ, ಯಾವುದೇ ದೋಷಾರೋಪಣೆಯ ಲೇಪನವನ್ನು ಅಂಟಿಸಿಕೊಳ್ಳದೆ ಗುಣಮಟ್ಟದ ಸುದ್ದಿಗಳಿಗೆ ಆದ್ಯತೆ ನೀಡುತ್ತ, ಎಲ್ಲರೂ ಸಮಾನರು ಎನ್ನುತ್ತ, ಯಾರೊಂದಿಗೂ ವೈಯುಕ್ತಿಕ ಭಿನ್ನಾಭಿಪ್ರಾಯವಿಲ್ಲದೆ. ತಪ್ಪು ಮಾಡುವ ವ್ಯಕ್ತಿಯನ್ನು/ವ್ಯವಸ್ಥೆಯನ್ನು ನಿರ್ಭಯವಾಗಿ ಟೀಕಿಸುತ್ತ. ಒಳ್ಳೆಯದನ್ನು ಗೌರವಿಸುತ್ತ, ಓದುಗರಿಗೆ ನ್ಯಾಯೋಚಿತ ಸುದ್ದಿಗಳನ್ನು ಜವಾಬ್ದಾರಿಯುತವಾಗಿ ಕೊಡುವುದಷ್ಟೇ ನಮ್ಮ ಆದ್ಯತೆಯಾಗಿರುತ್ತದೆ.

 

ಡಿಜಿಟಲ್ ಮಾಧ್ಯಮದಲ್ಲಿ ಅಂತರ್ಜಾಲ ಪತ್ರಿಕೆ ಅಥವಾ ವೆಬ್ ಸೈಟ್ (ನ್ಯೂಸ್ ಪೋರ್ಟಲ್) ಗೆ ಮೊದಲ ಆದ್ಯತೆ ನೀಡಿದ್ದು ವಿಶೇಷ ಅಂದಾಗ ಮಾತ್ರ youtube ಯೂಟ್ಯೂಬ್ ದೃಶ್ಯಮಾಧ್ಯಮದಲ್ಲಿ ಸುದ್ದಿ ಮುಟ್ಟಿಸುವಂತಹ ಪ್ರಯತ್ನ ಮಾಡುತ್ತೇವೆ. ಇದರೊಂದಿಗೆ “ಪೊಲೀಸ್ ರೌಂಡಪ್” ಕನ್ನಡ ಮಾಸಿಕ ಪತ್ರಿಕೆಯನ್ನು ಹೊರತರಲಾಗಿದೆ, ಬರುವಂತ ದಿನಗಳಲ್ಲಿ ಓದುಗರ, ಕೇಳುಗರ ಹಾಗೆ ನೋಡುಗರ ನಿರೀಕ್ಷೆಗಳನ್ನು ಪೂರೈಸಲು ಮೊಬೈಲ್ ಆಪ್ ಮೂಲಕ ಸುದ್ದಿಗಳನ್ನು ಬಿತ್ತರಿಸುವ ಉದ್ದೇಶ ಹೊಂದಿದ್ದೇವೆ. ಸದಾಕಾಲ ಓದುಗರ ಸಹಕಾರ ಆಶಿಸುತ್ತ ಸ್ವತಂತ್ರ ಪತ್ರಿಕೋದ್ಯಮವನ್ನು ಬೆಂಬಲಿಸುವಂತೆ ನಿಮ್ಮನ್ನು ಸದಾ ಕೋರುತ್ತೇವೆ.

ಸಂಪಾದಕೀಯ ಹೊಣೆಗಾರಿಕೆ — EDITORIAL RESPONSIBILITY :

 

POLICE ROUNDUP DIGITAL MEDIAಯಲ್ಲಿ ಪ್ರಕಟವಾಗುವ ಸಂಪಾದಕೀಯ ವಿಷಯದ ಅಂತಿಮ ಜವಾಬ್ದಾರಿ:

 

ತ್ಯಾಗರಾಜ್ ವಿ.ಎಸ್.
Editor & Publisher
POLICE ROUNDUP DIGITAL MEDIA

 

Website: www.policeroundup.in
Email: policeroundup100@gmail.com
Mobile: +91 73535 10100

ಸಂಸ್ಥೆಯ ವಿವರ :

WhatsApp_Image_2026-08-19_at_20.01.51-removebg-preview

Organisation Type: Proprietary
Enterprise Type: Micro
Udyam Registration No.: UDYAM-KR-03-0520192

 

POLICE ROUNDUP DIGITAL MEDIA ಸಂಸ್ಥೆಯ ಸಂಪಾದಕೀಯ ದಿಕ್ಕು, ಪ್ರಕಟಣೆ, ತಿದ್ದುಪಡಿ, ದೂರುಗಳ ಪರಿಶೀಲನೆ ಮತ್ತು ಸಂಪಾದಕೀಯ ಜವಾಬ್ದಾರಿಗಳ ಮೇಲ್ವಿಚಾರಣೆಯನ್ನು ತ್ಯಾಗರಾಜ್ ವಿ.ಎಸ್., Editor & Publisher ನಿರ್ವಹಿಸುತ್ತಾರೆ.

Solverwp- WordPress Theme and Plugin