ಬೆಂಗಳೂರು: ಬೆಂಗಳೂರಿನ ವಿಜ್ಞಾನ ಗ್ಯಾಲರಿಯಲ್ಲಿ (Science Gallery) ಆಯೋಜಿಸಲಾಗಿದ್ದ ‘QUANTUM’ ಉದ್ಘಾಟನಾ ಸಮಾರಂಭದಲ್ಲಿ ಅಮೆರಿಕದ ರಾಯಭಾರಿ ಶ್ರೀ ಸೆರ್ಗಿಯೋ ಗೋರ್ (Sergio Gor) ಅವರನ್ನು ಭೇಟಿಯಾಗಿ, ಕರ್ನಾಟಕ ಮತ್ತು ಅಮೆರಿಕ ನಡುವಿನ ಭವಿಷ್ಯದ ದ್ವಿಪಕ್ಷೀಯ ಬಾಂಧವ್ಯಗಳ ಕುರಿತು ಫಲಪ್ರದ ಚರ್ಚೆ ನಡೆಸಲಾಯಿತು. ಕರ್ನಾಟಕ ಮತ್ತು ಅಮೆರಿಕದ ನಡುವೆ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಸಂಶೋಧನೆ, ನಾವೀನ್ಯತೆ ಹಾಗೂ ಹೂಡಿಕೆ ವಲಯಗಳಲ್ಲಿ ಬಲಿಷ್ಠ ಹಾಗೂ ನಿರಂತರ ಸಂಪರ್ಕವನ್ನು ಏರ್ಪಡಿಸುವ ಕುರಿತು ಸಮಾಲೋಚಿಸಲಾಯಿತು. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ…
ರಾಣೇಬೆನ್ನೂರು: ರಾಜ್ಯದಲ್ಲಿ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ರೈತರಿಗೆ ಆರ್ಥಿಕ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಪ್ರತಿ ತಿಂಗಳು ₹10,000 ಗೌರವಧನ ನೀಡುವ ಯೋಜನೆಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಭಾರತೀಯ ಕೃಷಿ ಕಾರ್ಮಿಕ ರೈತ ಸಂಘಟನೆಯು ದಂಡಾಧಿಕಾರಿಗಳ (ತಹಸೀಲ್ದಾರ್) ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ತಹಸೀಲ್ದಾರ್ ಮುಖಾಂತರ ಸಲ್ಲಿಸಿದ ಈ ಮನವಿಯಲ್ಲಿ, ದೇಶದ ಅನ್ನದಾತರಾದ ರೈತರು ಮಳೆ, ಬಿಸಿಲು ಹಾಗೂ ಚಳಿಯನ್ನು ಲೆಕ್ಕಿಸದೆ ಜೀವನಪೂರ್ತಿ ಶ್ರಮಿಸಿ ದೇಶದ ಆಹಾರ ಭದ್ರತೆಯನ್ನು…