ಭದ್ರಾವತಿ: ಕುಟುಂಬಕ್ಕೆ ಅಪಾಯವಿದೆ ಎಂದು ವಾಮಾಚಾರದ ಭಯ ಹುಟ್ಟಿಸಿ ಪೂಜೆಯ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿದ್ದ ಖದೀಮನನ್ನು ಹೊಸಮನೆ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮುರಳಿ ಎಂದು ಗುರುತಿಸಲಾಗಿದೆ. ಪ್ರಕರಣದ ಹಿನ್ನೆಲೆ: ಭದ್ರಾವತಿಯ ಕೆಎಸ್‌ಆರ್‌ಟಿಸಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಯೊಬ್ಬರನ್ನು ಸಂಪರ್ಕಿಸಿದ್ದ ಆರೋಪಿಗಳು, ನಿಮ್ಮ ಕುಟುಂಬಕ್ಕೆ ವಾಮಾಚಾರದ ಭೀತಿಯಿದ್ದು ದೊಡ್ಡ ಅಪಾಯ ಕಾದಿದೆ ಎಂದು ನಂಬಿಸಿದ್ದರು. ಕುಟುಂಬದ ರಕ್ಷಣೆಗಾಗಿ ವಿಶೇಷ ಪೂಜೆ ನಡೆಸಬೇಕೆಂದು ಹೇಳಿ…
ಕೌಜಲಗಿ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕೊಲೆ ಮಾಡಿ, ಆಕೆಯ ಮೈಮೇಲಿದ್ದ ಬಂಗಾರದ ಆಭರಣಗಳನ್ನು ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಲಗೋಡ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಗೋಕಾಕ ತಾಲೂಕಿನ ಸಿಂಗಳಾಪೂರ ಗ್ರಾಮದ ದಿಲೀಪ ಶಶಿಕಾಂತ ಗಡಕರಿ (37) ಬಂಧಿತ ಆರೋಪಿ. ತಿಗಡಿ ಗ್ರಾಮದ (ಹಾಲಿ ಕೌಜಲಗಿ) ಅನ್ನಪೂರ್ಣ ಸಿದ್ದಪ್ಪಾ ವಡಚನ್ನವರ (34) ಕೊಲೆಯಾದ ದುರದೃಷ್ಟಕರ ಮಹಿಳೆ. ಪ್ರಕರಣದ ಹಿನ್ನೆಲೆ: ಕಳೆದ ಜುಲೈ 23, 2026 ರಂದು ಅನ್ನಪೂರ್ಣ ಅವರು ಕಾಣೆಯಾಗಿದ್ದರು. ಈ ಕುರಿತು…