ದಾಬಸ್‌ಪೇಟೆ: ಅಕ್ರಮವಾಗಿ ಜಿಲೆಟಿನ್ ಕಡ್ಡಿ ಹಾಗೂ ಡಿಟೋನೇಟರ್ ಸಾಗಣೆ ಮಾಡುತ್ತಿದ್ದ ಜಾಲದ ಮೇಲೆ ದಾಬಸ್‌ಪೇಟೆ ಪೊಲೀಸರು ದಿಢೀರ್ ದಾಳಿ ನಡೆಸಿ, ಆರೋಪಿ ಶಂಕರ್ ಎಂಬಾತನನ್ನು ಬಂಧಿಸಿದ್ದಾರೆ. ಬಂದಿತನಿಂದ 600 ಜಿಲೆಟಿನ್ ಕಡ್ಡಿ ಹಾಗೂ 100 ಎಲೆಕ್ಟ್ರಿಕ್ ಡಿಟೋನೇಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಡಿವೈಎಸ್‌ಪಿ (DySP) ಉಮಾರಾಣಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ನಡೆದ ಈ ಯಶಸ್ವಿ ಕಾರ್ಯಾಚರಣೆಯಲ್ಲಿ, ಆರೋಪಿಯು ಕೊರಟಗೆರೆಯಿಂದ ಜಾಜೂರಿನತ್ತ ಕಾರಿನಲ್ಲಿ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ರೆಡ್‌ಹ್ಯಾಂಡಾಗಿ ಸೆರೆಹಿಡಿದಿದ್ದಾರೆ. ಯಾವುದೇ…
ಬೆಂಗಳೂರು: ನಗರದಿಂದ ಗಡಿಪಾರು ಮಾಡಲಾಗಿದ್ದರೂ ನಿಯಮ ಉಲ್ಲಂಘಿಸಿ ಬೆಂಗಳೂರಿಗೆ ಪ್ರವೇಶಿಸಿ, ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ ಹಾಗೂ ಆತನ ನಾಲ್ವರು ಸಹಚರರನ್ನು ಸಿ.ಕೆ. ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ. ರೌಡಿ ಧನುಷ್ ಅಲಿಯಾಸ್ ದಡಿಯಾ ಹಾಗೂ ಆತನ ಗ್ಯಾಂಗ್‌ನ ಒಟ್ಟು ಐವರು ಆರೋಪಿಗಳನ್ನು ಪೊಲೀಸರು ಕಂಬಿ ಎಣಿಸುವಂತೆ ಮಾಡಿದ್ದಾರೆ. ಪ್ರಕರಣದ ವಿವರ: ಧನುಷ್ ಅಲಿಯಾಸ್ ದಡಿಯಾನನ್ನು ಒಂದು ವರ್ಷದ ಅವಧಿಗೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಿಂದ ಗಡಿಪಾರು ಮಾಡಿ, ತುಮಕೂರು ಜಿಲ್ಲೆಯ…