ಕುಶಾಲನಗರ: ಇಲ್ಲಿನ ಕಾವೇರಿ ನದಿಯ ದಡದಲ್ಲಿ ಪಾರ್ಟಿ ಮಾಡಿ, ಬಳಿಕ ಈಜಲು ನದಿಗಿಳಿದಿದ್ದ ನಾಗಾಲ್ಯಾಂಡ್ ಮೂಲದ ಇಬ್ಬರು ವಲಸೆ ಯುವಕರು ನದಿಯ ಆಳವಾದ ಗುಂಡಿಗೆ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಧಾರುಣ ಘಟನೆ ಬುಧವಾರ ಸಂಜೆ ನಡೆದಿದೆ. ನಾಗಾಲ್ಯಾಂಡ್ ರಾಜ್ಯದ ನಿವಾಸಿಗಳಾದ ಬಸೋಸೊ ಕುಂ ಚಂಗ್ (23) ಹಾಗೂ ಯಾಂಕಾಂಗ್ (27) ಕಾವೇರಿ ನದಿಯಲ್ಲಿ ಜಲಸಮಾಧಿಯಾದ ದುರ್ದೈವಿ ಯುವಕರಾಗಿದ್ದಾರೆ. ಮೃತಪಟ್ಟ ಯುವಕರಿಬ್ಬರು ಕುಶಾಲನಗರದ ಪ್ರಸಿದ್ಧ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಬುಧವಾರದಂದು ಕೆಲಸಕ್ಕೆ ರಜೆ…
ನಂಜನಗೂಡು: ಇಲ್ಲಿನ ಪ್ರಸಿದ್ಧ ನೆಸ್ಲೆ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆಯ ಲ್ಯಾಬ್ ಒಳಗೆ ಗುತ್ತಿಗೆ ಆಧಾರದ ಕಾರ್ಮಿಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೈರ್ಯಗೇಡಿನ ಘಟನೆ ನಡೆದಿದೆ. ಸಹೋದ್ಯೋಗಿಗಳ ನಿರಂತರ ಮಾನಸಿಕ ಕಿರುಕುಳವೇ ಈ ಸಾವಿಗೆ ಕಾರಣ ಎಂದು ಮೃತರು ಬರೆದಿಟ್ಟಿರುವ ಡೆತ್‌ನೋಟ್‌ನಿಂದ ತಿಳಿದುಬಂದಿದೆ. ನಂಜನಗೂಡು ತಾಲ್ಲೂಕಿನ ಹಂಡುವಿನಹಳ್ಳಿ ಗ್ರಾಮದ ನಿವಾಸಿ ಕುಮಾರಸ್ವಾಮಿ (48) ಆತ್ಮಹತ್ಯೆಗೆ ಶರಣಾದ ದುರ್ದೈವಿ ಕಾರ್ಮಿಕ. ಮೂಲತಃ ನಂಜನಗೂಡು ತಾಲ್ಲೂಕಿನ ಕಪ್ಪಸೋಗೆ ಗ್ರಾಮದವರಾದ ಕುಮಾರಸ್ವಾಮಿ ಅವರು ಸದ್ಯ ಪತ್ನಿಯ ತವರೂರಾದ ಹಂಡುವಿನಹಳ್ಳಿ ಗ್ರಾಮದಲ್ಲಿ…