ರಾಣೇಬೆನ್ನೂರು: ದಿನದಿಂದ ದಿನಕ್ಕೆ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಾಗೂ ಹಾವೇರಿ ಜಿಲ್ಲೆಯಲ್ಲೇ ದೊಡ್ಡ ವ್ಯಾಪಾರ ಕೇಂದ್ರವಾಗಿರುವ ವಾಣಿಜ್ಯ ನಗರಿ ರಾಣೇಬೆನ್ನೂರಿನ ನಾಗರಿಕರ ಸುರಕ್ಷತೆಗಾಗಿ ನಗರಕ್ಕೆ ಮತ್ತೊಂದು ಹೆಚ್ಚುವರಿ ಪೊಲೀಸ್ ಠಾಣೆಯ ಅಗತ್ಯವಿದೆ. ಈ ಕೂಡಲೇ ಹೊಸ ಠಾಣೆಯನ್ನು ಮಂಜೂರು ಮಾಡಿಕೊಡಬೇಕು ಎಂದು ರೈತರು, ವರ್ತಕರು, ಉದ್ಯಮಿಗಳು, ಕಾರ್ಮಿಕರು ಹಾಗೂ ನಾಗರಿಕರು ಪೂರ್ವ ವಲಯದ ಐಜಿಪಿ ಡಾ. ಬಿ. ಆರ್. ರವಿಕಾಂತೇಗೌಡ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು. ಇಲ್ಲಿನ ಪೊಲೀಸ್ ಠಾಣೆಗೆ ಐಜಿಪಿ ಡಾ. ಬಿ. ಆರ್….
ಹೊನ್ನಾವರ: ಮಿತಿಗಿಂತ ಹೆಚ್ಚು ಭಾರ (ಓವರ್ ಲೋಡ್) ತುಂಬಿಕೊಂಡು ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಬರೋಬ್ಬರಿ 17 ಲಾರಿಗಳನ್ನು ಪ್ರಾದೇಶಿಕ ಸಾರಿಗೆ (RTO) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ. ಮಂಗಳೂರಿನ ಪಣಂಬೂರಿನಿಂದ ಹೊನ್ನಾವರದ ಕಡೆಗೆ ಬರುತ್ತಿದ್ದ ಈ ವಾಹನಗಳನ್ನು ಮಾರ್ಗಮಧ್ಯೆ ತಡೆದ ಅಧಿಕಾರಿಗಳು ತೀವ್ರ ತಪಾಸಣೆ ನಡೆಸಿದಾಗ ಈ ನಿಯಮ ಬಾಹಿರ ಓವರ್ ಲೋಡ್ ಸಾಗಾಟದ ಅಕ್ರಮ ಬೆಳಕಿಗೆ ಬಂದಿದೆ. ವಶಪಡಿಸಿಕೊಂಡ ಎಲ್ಲಾ 17 ವಾಹನಗಳಲ್ಲಿ ಭಾರಿ ಗಾತ್ರದ ಶಿಲೆ…