ಬೆಂಗಳೂರು: ಪತ್ನಿಯು ಆರ್ಥಿಕವಾಗಿ ಸದೃಢಳಾಗಿದ್ದು, ಗಂಡನಿಗಿಂತಲೂ ಹೆಚ್ಚು ಸಂಪಾದನೆ ಮಾಡುತ್ತಿದ್ದರೆ ಹಾಗೂ ಮಕ್ಕಳನ್ನು ನೋಡಿಕೊಳ್ಳುವಂತಹ ಯಾವುದೇ ಹೆಚ್ಚುವರಿ ಹೊಣೆಗಾರಿಕೆ ಹೊಂದಿಲ್ಲ ಎಂದಾದರೆ, ಆಕೆ ಗಂಡನಿಂದ ಜೀವನಾಂಶ (Maintenance) ಪಡೆಯಲು ಅರ್ಹಳಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕುಟುಂಬ ನ್ಯಾಯಾಲಯವೊಂದು ಪತಿಗೆ ಜೀವನಾಂಶ ನೀಡುವಂತೆ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಮಾನ್ಯ ಹೈಕೋರ್ಟ್, ಹೆಂಡತಿ ಸ್ವಾವಲಂಬಿಯಾಗಿದ್ದಾಗ ಗಂಡನೇ ಜೀವನಾಂಶ ನೀಡಬೇಕು ಎನ್ನುವುದು ಕಡ್ಡಾಯವಲ್ಲ ಎಂದು ಸ್ಪಷ್ಟಪಡಿಸಿದೆ. ಪ್ರಕರಣದ ವಿವರಗಳ ಪ್ರಕಾರ,…
ಬೇಲೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ವಿಧಾನ ಪರಿಷತ್ ಚುನಾವಣೆಯ ಅಡ್ಡ ಮತದಾನ (Cross Voting) ಆರೋಪದ ಕಿಡಿ ಈಗ ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿ ತಲುಪಿದೆ. ತಮ್ಮ ಮೇಲಿನ ಕ್ರಾಸ್ ವೋಟಿಂಗ್ ಕಳಂಕವನ್ನು ತೊಳೆದುಕೊಳ್ಳಲು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಅವರು ಇಂದು (ಮಂಗಳವಾರ) ಧರ್ಮಸ್ಥಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ವಿಧಾನ ಪರಿಷತ್ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಭುಗಿಲೆದ್ದಿದ್ದ ಅಡ್ಡ ಮತದಾನದ ವಿವಾದವು, ಈಗ ಮಲೆನಾಡಿನ ಶಾಸಕರೊಬ್ಬರ…