ದೋಡಾ (ಜಮ್ಮು ಮತ್ತು ಕಾಶ್ಮೀರ): ಜಾತ್ರೆ ಮುಗಿಸಿ ಮನೆಗೆ ವಾಪಸಾಗುತ್ತಿದ್ದ ಯುವತಿಯೊಬ್ಬಳು ಸೇತುವೆ ಬಳಿ ನಿಗೂಢ ರೀತಿಯಲ್ಲಿ ಚೆನಾಬ್ ನದಿಗೆ ಬಿದ್ದು ನಾಪತ್ತೆಯಾಗಿರುವ ಘಟನೆ ಜಿಲ್ಲೆಯ ಪ್ರೇಮ್ ನಗರದಲ್ಲಿ ನಡೆದಿದೆ. ಪಾಯಲ್ ದೇವಿ ನಾಪತ್ತೆಯಾದ ಯುವತಿ. ಈ ಘಟನೆಯ ಆತಂಕಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆಯ ವಿವರ: ಜಾತ್ರೆಗೆ ತೆರಳಿದ್ದ ಪಾಯಲ್ ದೇವಿ, ವಾಪಸ್ ಮನೆಗೆ ಬರಲು ಪರಿಚಿತ ವ್ಯಕ್ತಿಯೊಬ್ಬರ ದ್ವಿಚಕ್ರವಾಹನದಲ್ಲಿ ಹೊರಟಿದ್ದರು. ಮಾರ್ಗಮಧ್ಯೆ ಪ್ರೇಮ್ ನಗರದ ಸೇತುವೆ ಬಳಿ ಬಂದಾಗ…
ಬೆಂಗಳೂರು: ಫ್ರಾನ್ಸ್ ಮೂಲದ ಜಾಗತಿಕ ಆಹಾರ ಮತ್ತು ಪೌಷ್ಟಿಕಾಂಶ ಕ್ಷೇತ್ರದ ದೈತ್ಯ ಸಂಸ್ಥೆಯಾದ ‘ಡ್ಯಾನೋನ್’ (Danone) ಪ್ರತಿನಿಧಿಗಳೊಂದಿಗೆ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗವು ಮಹತ್ವದ ಸಭೆ ನಡೆಸಿದ್ದು, ಕರ್ನಾಟಕದಲ್ಲಿ ಹೂಡಿಕೆ ಹಾಗೂ ಉದ್ಯಮ ವಿಸ್ತರಣೆಯ ಕುರಿತು ಸುದೀರ್ಘ ಚರ್ಚೆ ನಡೆಸಿದೆ. ಡೇರಿ, ಸಸ್ಯಾಧಾರಿತ ಉತ್ಪನ್ನಗಳು ಹಾಗೂ ವಿಶೇಷ ಪೌಷ್ಟಿಕಾಂಶ ವಲಯದಲ್ಲಿ ವಿಶ್ವದ ೧೨೦ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಡ್ಯಾನೋನ್ ಸಂಸ್ಥೆಗೆ, ದಕ್ಷಿಣ ಭಾರತದಲ್ಲಿ ತನ್ನ ಮುಂದಿನ ಹಂತದ ಬೆಳವಣಿಗೆಗೆ ಕರ್ನಾಟಕವನ್ನು ಪ್ರಮುಖ ‘ಹಬ್’…