ಆನೇಕಲ್: ಶಾಲಾ ಶಿಕ್ಷಕಿಯೊಬ್ಬರು ಸಾರ್ವಜನಿಕವಾಗಿ ನಿಂದಿಸಿ, ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮನನೊಂದ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿರುವ ಅತ್ಯಂತ ಕರುಣಾಜನಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮರಸೂರು ಮಡಿವಾಳ ಗ್ರಾಮದಲ್ಲಿ ನಡೆದಿದೆ. ಮರಸೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಮಧುಶ್ರೀ ಎಂಬ ಬಾಲಕಿಯೇ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಬೆಳಗ್ಗೆ ಪೋಷಕರು ಗಮನಿಸಿದಾಗ ಮಗಳ ಆತ್ಮಹತ್ಯೆಯ ಕಟು ಸತ್ಯ ಬೆಳಕಿಗೆ…
ತುಮಕೂರು: ಸಿನಿಮಾ ಕಥೆ ಹಾಗೂ ಕ್ರೈಂ ವೆಬ್ ಸೀರೀಸ್‌ಗಳನ್ನೂ ಮೀರಿಸುವಂತೆ ರಾಜ್ಯವ್ಯಾಪಿ ಹರಡಿದ್ದ ಖೋಟಾ ನೋಟು (Fake Note) ದಂಧೆಯ ಬೃಹತ್ ಜಾಲವನ್ನು ಜಾಲಾಡುವಲ್ಲಿ ಜಿಲ್ಲೆಯ ಚಿಕ್ಕನಾಯಕನಹಳ್ಳಿ ಮತ್ತು ಹುಳಿಯೂರು ಪೊಲೀಸರು ಜಂಟಿಯಾಗಿ ಯಶಸ್ವಿಯಾಗಿದ್ದಾರೆ. ಕೇವಲ ಒಂದೇ ಒಂದು 500 ರೂಪಾಯಿ ಮುಖಬೆಲೆಯ ನಕಲಿ ನೋಟಿನ ಸುಳಿವು ಬೆನ್ನತ್ತಿದ ಖಾಕಿ ಪಡೆ, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ನೆಟ್‌ವರ್ಕ್ ಹೊಂದಿದ್ದ ಮುದ್ರಣ, ಮಾರಾಟ ಮತ್ತು ಚಲಾವಣೆಯ ಪ್ರತ್ಯೇಕ ವ್ಯವಸ್ಥಿತ ಜಾಲವನ್ನು ಧ್ವಂಸಗೊಳಿಸಿ, ಆರು ಮಂದಿ…