ಬೆಂಗಳೂರು: ಕಿರುಚಿತ್ರದಲ್ಲಿ (Short Movie) ನಟಿಸಲು ಅವಕಾಶ ಕೊಡಿಸುವುದಾಗಿ ನಂಬಿಸಿ, ನಟನ ಮನೆಯಲ್ಲೇ ಕೈಚಳಕ ತೋರಿಸಿ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿನಿಮಾ ಹಾಗೂ ಕಿರುಚಿತ್ರಗಳಲ್ಲಿ ನಟಿಸುವ ಹಂಬಲವಿರುವವರನ್ನು ಗುರಿಯಾಗಿಸಿಕೊಂಡು ಈತ ಈ ಕೃತ್ಯ ಎಸಗುತ್ತಿದ್ದ ಎನ್ನಲಾಗಿದೆ. ಸಂತ್ರಸ್ತ ನಟನಿಗೆ ಪರಿಚಯವಾಗಿದ್ದ ಆರೋಪಿ, ತನಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಸಂಪರ್ಕವಿದೆ ಎಂದು ನಂಬಿಸಿದ್ದಾನೆ. ಶಾರ್ಟ್ ಮೂವಿಯೊಂದರಲ್ಲಿ ಮುಖ್ಯ ಪಾತ್ರ ಕೊಡಿಸುವುದಾಗಿ ನಟನಿಗೆ ಆಮಿಷ ಒಡ್ಡಿದ್ದಾನೆ. ಚಿತ್ರದ ಕಥೆ…
ಬೆಂಗಳೂರು: ಹಿಂದೂಗಳ ಆರಾಧ್ಯ ದೈವವಾದ ಲಕ್ಷ್ಮೀ ದೇವಿಯ ಬಗ್ಗೆ ಅತ್ಯಂತ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಪ್ರಸಿದ್ಧ ಜ್ಯೋತಿಷಿ ಆರ್ಯವರ್ಧನ್ ಗುರೂಜಿ ವಿರುದ್ಧ ನಗರದ ಶಂಕರಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಅವರು ಲಕ್ಷ್ಮೀ ದೇವಿಯ ಕುರಿತು ಆಡಿದ ಮಾತುಗಳು ಭಕ್ತರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹಿಂದೂ ಧರ್ಮದ ನಂಬಿಕೆಗಳನ್ನು ಅಪಹಾಸ್ಯ ಮಾಡುವಂತಹ ಹಾಗೂ ಕೀಳಾಗಿ ಬಿಂಬಿಸುವ ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಭಕ್ತರು…