ಕೋಲಾರ: ಗ್ರಾಮೀಣ ಭಾಗದ ರೈತರ ಕೃಷಿ ಪಂಪ್‌ಸೆಟ್ ಹಾಗೂ ದುಬಾರಿ ತಾಮ್ರದ ಕೇಬಲ್‌ಗಳನ್ನು ಸರಣಿ ಕಳ್ಳತನ ಮಾಡುತ್ತಾ ಅನ್ನದಾತರ ನಿದ್ದೆಗೆಡಿಸಿದ್ದ ಇಬ್ಬರು ಖದೀಮರನ್ನು ಗ್ರಾಮಸ್ಥರೇ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಶ್ಲಾಘನೀಯ ಘಟನೆ ಕೋಲಾರ ತಾಲೂಕಿನ ದೊಡ್ಡಹಸಾಳ ಗ್ರಾಮದಲ್ಲಿ ನಡೆದಿದೆ. ಕೋಲಾರ ನಗರದ ಗಾಂಧಿನಗರ ನಿವಾಸಿಗಳಾದ ಚೇತನ್ ಮತ್ತು ಸುದೀಪ್ ಎಂಬುವವರೇ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದು ಸದ್ಯ ಕಂಬಿ ಎಣಿಸುತ್ತಿರುವ ಕಳ್ಳರು. ದೊಡ್ಡಹಸಾಳ ಗ್ರಾಮದ ಜಮೀನೊಂದರಲ್ಲಿ ರೈತರು ಕೃಷಿ…
ನಂಜನಗೂಡು: ಮೈಕ್ರೋ ಫೈನಾನ್ಸ್ ಕಂಪನಿಗಳ ದೌರ್ಜನ್ಯ ಮತ್ತು ಕಿರುಕುಳಕ್ಕೆ ಬ್ರೇಕ್ ಹಾಕಲು ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದ್ದರೂ, ಗ್ರಾಮೀಣ ಭಾಗದಲ್ಲಿ ಖಾಸಗಿ ಫೈನಾನ್ಸ್‌ಗಳ ಹಾವಳಿ ಮಾತ್ರ ನಿಂತಿಲ್ಲ. ಸಾಲದ ಕಂತು ತಡವಾಗಿದೆ ಎಂಬ ಒಂದೇ ಕಾರಣಕ್ಕೆ ವೃದ್ಧೆಯೊಬ್ಬರ ಮನೆಗೆ ಕಾನೂನುಬಾಹಿರವಾಗಿ ಬೀಗ ಜಡಿದು, ಇಡೀ ಕುಟುಂಬವನ್ನೇ ಬೀದಿಗೆ ತಳ್ಳಿರುವ ಅಮಾನವೀಯ ಘಟನೆ ನಂಜನಗೂಡು ತಾಲೂಕಿನ ಕಾಟೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನ್ಯಾಯ ಸಿಗದಿದ್ದರೆ ವಿಷ ಸೇವಿಸುವುದಾಗಿ ನೊಂದ ಕುಟುಂಬ ತಹಸೀಲ್ದಾರ್‌ಗೆ ಎಚ್ಚರಿಕೆ ನೀಡಿದೆ. ನಂಜನಗೂಡು ತಾಲೂಕು…