ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ನಡೆದಿದ್ದ ಭೀಕರ ಸಾಮೂಹಿಕ ಅತ್ಯಾಚಾರ ಹಾಗೂ ವಿಡಿಯೋ ಹರಿಬಿಟ್ಟ ಪ್ರಕರಣದ 9 ಜನ ಆರೋಪಿಗಳನ್ನು ನ್ಯಾಯಾಲಯವು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಮತ್ತೊಬ್ಬ ಅಪ್ರಾಪ್ತ ಬಾಲಕನನ್ನು ಬಾಲಮಂದಿರಕ್ಕೆ (ರಿಮ್ಯಾಂಡ್ ಹೋಂ) ದಾಖಲಿಸಲಾಗಿದೆ. ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಜೂನ್ 3 ರಂದು ಮಹಿಳೆಯೊಬ್ಬರ ಮೇಲೆ ಈ ಸಾಮೂಹಿಕ…
ಮಂಡ್ಯ: ಆರೋಪಿಯೊಬ್ಬನಿಗೆ ಠಾಣಾ ಜಾಮೀನು (ಸ್ಟೇಷನ್ ಬೇಲ್) ನೀಡಲು ಭ್ರಷ್ಟಾಚಾರದ ದಾರಿ ಹಿಡಿದಿದ್ದ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಸಹಾಯಕ ಸಬ್ಇನ್ಸ್ಪೆಕ್ಟರ್ (ಎಎಸ್ಐ) ಶಿವಕುಮಾರ್ ಅವರು ₹10,000 ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಳವಳ್ಳಿಯ ನಿವಾಸಿಯಾದ ರಾಜೇಗೌಡ ಎಂಬುವವರ ವಿರುದ್ಧ ಇತ್ತೀಚೆಗೆ ಗಲಾಟೆ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಠಾಣೆಯಲ್ಲೇ ಜಾಮೀನು ನೀಡಿ, ಕೇಸ್ ಇತ್ಯರ್ಥ ಪಡಿಸಿಕೊಡಲು ಎಎಸ್ಐ ಶಿವಕುಮಾರ್ ಅವರು ₹10,000 ಲಂಚ ನೀಡುವಂತೆ ಪಟ್ಟು ಹಿಡಿದಿದ್ದರು ಎನ್ನಲಾಗಿದೆ. …