ಹಾಸನ: ದಕ್ಷಿಣ ಬೆಂಗಳೂರಿನ ಭೂಗತ ವಲಯದಲ್ಲಿ ಕಳೆದ ಹದಿನೈದು ವರ್ಷಗಳಿಂದ ಸದ್ದು ಮಾಡ್ತಿದ್ದ ರೌಡಿಗಳ ಹಳೇ ವೈಷಮ್ಯ ಈಗ ಹಾಸನದಲ್ಲಿ ರಕ್ತಸಿಕ್ತ ಅಂತ್ಯ ಕಂಡಿದೆ. ಬೆಂಗಳೂರಿನ ತಲಘಟ್ಟಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ಆವಲಳ್ಳಿ ಮಂಜೇಶ್ (ಮಂಜ) ಎಂಬಾತನನ್ನು ಆತನ ಬದ್ಧ ವೈರಿ ಕೆಂಬತ್ತಳ್ಳಿ ಪರಮೇಶ್ ಅಲಿಯಾಸ್ ಪರಮಿ ಗ್ಯಾಂಗ್ ತಡರಾತ್ರಿ ಹಾಸನದ ಕೋರ್ಟ್ ರಸ್ತೆಯಲ್ಲೇ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದೆ. ಇತ್ತೀಚೆಗಷ್ಟೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದ ರೌಡಿ ಶೀಟರ್ ಮಂಜೇಶ್, ಹಾಸನದ…
ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಿವಾಸವಿರುವ ರಾಜಧಾನಿಯ ಹೈಪ್ರೊಫೈಲ್ ವಲಯ ಸದಾಶಿವನಗರದಲ್ಲಿ ಮಾಟ-ಮಂತ್ರದಂತಹ ವಾಮಾಚಾರ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. ಮುಖ್ಯಮಂತ್ರಿಗಳ ನಿವಾಸಕ್ಕೆ ಕೂಗಳತೆಯ ದೂರದಲ್ಲೇ ಈ ಕೃತ್ಯ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸದಾಶಿವನಗರದ ಜಿಬಿಎ ಮೈದಾನದ ಮುಂಭಾಗದ ರಸ್ತೆಯ ಮಧ್ಯೆ ಈ ಘಟನೆ ಬೆಳಕಿಗೆ ಬಂದಿದೆ. ಅಪರಿಚಿತ ವ್ಯಕ್ತಿಗಳು ರಸ್ತೆಯ ಮಧ್ಯದಲ್ಲೇ ದೊಡ್ಡದೊಂದು ವೃತ್ತಾಕಾರವನ್ನು ಹಾಕಿ, ಅಲ್ಲಿ ಕೋಳಿಯನ್ನು ಬಲಿ ಕೊಟ್ಟು, ನಿಂಬೆಹಣ್ಣುಗಳನ್ನು…