ಶಿವಮೊಗ್ಗ: ನಗರದ ಮಂಡ್ಲಿ ಭಾಗದ ಪೇಪರ್ ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಪಕ್ಕದಲ್ಲಿದ್ದ ಸುಮಾರು ಏಳುವರೆ ಅಡಿ ಉದ್ದದ ದೈತ್ಯ ಹೆಬ್ಬಾವನ್ನು ಉರಗ ಪ್ರೇಮಿ ‘ಸ್ನೇಕ್ ಕಿರಣ್’ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ. ಕಾರ್ಖಾನೆ ಪಕ್ಕದ ಪ್ಲಾಸ್ಟಿಕ್ ಚೀಲಗಳ ರಾಶಿಯಲ್ಲಿ ಮಲಗಿದ್ದ ಸುಮಾರು 10 ಕೆಜಿಗೂ ಅಧಿಕ ತೂಕದ ಈ ಭಾರಿ ಪ್ರಮಾಣದ ಹೆಬ್ಬಾವನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದರು. ತಕ್ಷಣವೇ ಉರಗ ಪ್ರೇಮಿ ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್,…
ಸಾಗರ: ಚಾಲಕನ ನಿಯಂತ್ರಣ ತಪ್ಪಿ ಟೈಲ್ಸ್ ತುಂಬಿದ್ದ ಟಾಟಾ ಏಸ್ ವಾಹನವೊಂದು ಪಲ್ಟಿಯಾಗಿ, ಹಿಂಬದಿಯಲ್ಲಿ ಕುಳಿತಿದ್ದ 20 ವರ್ಷದ ಯುವಕ ಸ್ಥಳದಲ್ಲೇ ದುರ್ಮರಣಕ್ಕೀಡಾದ ಭೀಕರ ಘಟನೆ ಸಾಗರ ತಾಲೂಕಿನ ಬಳೆಗಾರು ಗ್ರಾಮದ ಸಮೀಪ ನಡೆದಿದೆ. ಬಳಸಗೋಡು ಗ್ರಾಮದ ಹರೀಶ್ ಎಂಬುವವರ ಪುತ್ರ ರಾಕೇಶ್ (20) ಮೃತಪಟ್ಟ ದುರದೃಷ್ಟಕರ ಯುವಕ. ಘಟನೆಯ ವಿವರ: ಟೈಲ್ಸ್ ಸಾಮಗ್ರಿಗಳನ್ನು ಹೇರಿಕೊಂಡು ಸಾಗರದಿಂದ ತಾಳಗುಪ್ಪ ಕಡೆಗೆ ಹೊರಟಿದ್ದ ಟಾಟಾ ಏಸ್ ವಾಹನ ಬಳೆಗಾರು ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ…