ಬೆಂಗಳೂರು: ನಗರದಲ್ಲಿ ಅಕ್ರಮ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಸಮರ ಮುಂದುವರಿಸಿರುವ ಗಿರಿನಗರ ಠಾಣೆ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ ಬೃಹತ್ ಪ್ರಮಾಣದ ಎಂಡಿಎಂಎ (MDMA) ಸೈಕೋಟ್ರೋಪಿಕ್ ವಸ್ತುವಿನೊಂದಿಗೆ ನೈಜೀರಿಯಾ ಮೂಲದ ಪೆಡ್ಲರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೈಜೀರಿಯಾ ಪ್ರಜೆ ಪೀಟರ್ ಆಲ್ಫ್ರಿಡ್ (೩೭) ಬಂಧಿತ ಆರೋಪಿ. ಮನೆಯಲ್ಲಿ ಚೂಡಿದಾರ್‌ನಲ್ಲಿ ಬಾಂಧಿಸಿಟ್ಟಿದ್ದ ಡ್ರಗ್ಸ್: ಬ್ಯುಸಿನೆಸ್ ವಿಸಾ ಅಡಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಆರೋಪಿಯು, ದೆಹಲಿಯಿಂದ ಡ್ರಗ್ಸ್ ತರಿಸಿಕೊಂಡು ನಗರದಲ್ಲಿ ಅಕ್ರಮ ಮಾರಾಟ ಜಾಲ ನಡೆಸುತ್ತಿದ್ದ. ವಿಶೇಷವೆಂದರೆ, ಪೊಲೀಸರಿಗೆ ಅನುಮಾನ…
ಬೀರೂರು: ಕಡೂರು ತಾಲೂಕಿನ ಬೀರೂರು ಪಟ್ಟಣದಲ್ಲಿ ನಿರ್ಮಿಸಲಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 12 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆಯನ್ನು ಸೆಪ್ಟೆಂಬರ್ 10 ರಂದು ವೈಭವದ ಸಮಾರಂಭದಲ್ಲಿ ಲೋಕಾರ್ಪಣೆ ಮಾಡಲಾಗುವುದು. ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಪ್ರತಿಮ ಶೌರ್ಯ, ತ್ಯಾಗ ಮತ್ತು ದೇಶಪ್ರೇಮ ಮೆರೆದ ವೀರ ಸೇನಾನಿ ರಾಯಣ್ಣ ಅವರ ಸ್ಮರಣಾರ್ಥ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಯುವಜನತೆಯಲ್ಲಿ ದೇಶಭಕ್ತಿ ಹಾಗೂ ರಾಯಣ್ಣನವರ ಆದರ್ಶಗಳನ್ನು ಬಿತ್ತುವ ಉದ್ದೇಶದಿಂದ ಕಾರ್ಯಕ್ರಮದ ಅಂಗವಾಗಿ ಹಲವು ಸಾಂಸ್ಕೃತಿಕ ಹಾಗೂ ವೈಚಾರಿಕ ವೇದಿಕೆಗಳನ್ನು…