ದಾವಣಗೆರೆ: ಮದುವೆಯಾಗಿ ಕೇವಲ ಎರಡು ವರ್ಷ ಕಳೆಯುವಷ್ಟರಲ್ಲೇ ಗೃಹಿಣಿಯೊಬ್ಬಳು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ನಗರದ ಅಂಚೆ ಇಲಾಖೆ ವಸತಿಗೃಹದಲ್ಲಿ ನಡೆದಿದೆ. ಮೃತಳನ್ನು ಮಂಡಲೂರು ಗ್ರಾಮದ ಕಾವ್ಯ (26) ಎಂದು ಗುರುತಿಸಲಾಗಿದ್ದು, ಈ ಸಾವಿನ ಹಿಂದೆ ಪತಿಯ ಕೈವಾಡವಿದೆ ಎಂದು ಕಾವ್ಯ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ಮಂಡಲೂರು ಗ್ರಾಮದ ಕಾವ್ಯ ಅವರ ವಿವಾಹವು ಹೊದಿಗೆರೆ ನಿವಾಸಿ ಮನು ಎಂಬುವವರ ಜೊತೆ 2024ರ ಮೇ ತಿಂಗಳಲ್ಲಿ ಅದ್ಧೂರಿಯಾಗಿ ನಡೆದಿತ್ತು. ದಾಂಪತ್ಯ ಜೀವನ ಸುಸೂತ್ರವಾಗಿ ಸಾಗುತ್ತಿದ್ದ ನಡುವೆಯೇ, ಮನು…
ಬೆಳಗಾವಿ: ಮೋಜು-ಮಸ್ತಿಗಾಗಿ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಎಮ್.ಓ.ಬಿ (M.O.B) ಅಪರಾಧಿಯನ್ನು ಬಂಧಿಸುವಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸುಮಾರು 8 ವಿವಿಧ ಮಾದರಿಯ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬೆನಕನಹೊಳಿ ಗ್ರಾಮದ ಸಂಜು @ ಸಂಜ್ಯಾ ಮಲ್ಲಪ್ಪಾ ಮೇಕಲಿ ಬಂಧಿತ ಆರೋಪಿ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಮೋಟಾರ್ ಸೈಕಲ್ ಕಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದವು. ಇತ್ತೀಚೆಗೆ ಏಪ್ರಿಲ್ 11ರಂದು ಹುಕ್ಕೇರಿ ತಾಲೂಕಿನ ನರಸಿಂಗಪೂರ ಗ್ರಾಮದ ಅಂಡರ್‌ಪಾಸ್ ಬಳಿ ಗಂಗಪ್ಪಾ ಕೊಡದವರ…