ರಾಣೇಬೆನ್ನೂರು: ರಸ್ತೆ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದ ಕಾರ್ಮಿಕರ ಮೇಲೆ ಅತಿವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಹಿಳಾ ಕಾರ್ಮಿಕರು ಸ್ಥಳದಲ್ಲೇ ದುರ್ಮರಣಕ್ಕೀಡಾದ ಘೋರ ದುರಂತ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗುಡ್ಡದ ಆನ್ವೇರಿ ಬಳಿ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದೆ. ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದ ನಿವಾಸಿಗಳಾದ ಶೈಲವ್ವ ಮೇಕಳಿ (55) ಹಾಗೂ ಪವಿತ್ರಾ ಚೂರಿ (40) ಮೃತಪಟ್ಟ ದುರದೃಷ್ಟಕರ ಮಹಿಳೆಯರು. ದುರಂತದ ವಿವರ: ಸದರಿ ರಾಜ್ಯ ಹೆದ್ದಾರಿಯಲ್ಲಿ ಕಾರ್ಮಿಕರು ರಸ್ತೆ ದುರಸ್ತಿ…
ದೊಡ್ಡಬಳ್ಳಾಪುರ: ನಗರದ ಭಗತ್ ಸಿಂಗ್ ಮೈದಾನದ ರಸ್ತೆಯಲ್ಲಿ ಬಾಯ್ತೆರೆದಿರುವ ಚರಂಡಿ ಹಾಗೂ ರಸ್ತೆ ಗುಂಡಿಗಳು ವಾಹನ ಸವಾರರಿಗೆ ಆಹುತಿಯಾಗುತ್ತಿದ್ದು, ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಆಟೋವೊಂದು ನಿಯಂತ್ರಣ ತಪ್ಪಿ ತೆರೆದ ಚರಂಡಿಗೆ ಉರುಳಿದ ಘಟನೆ ಸಂಭವಿಸಿದೆ. ಪ್ರತಿನಿತ್ಯ ನೂರಾರು ವಾಹನಗಳು ಹಾಗೂ ಸಾರ್ವಜನಿಕರು ಸಂಚರಿಸುವ ಈ ಮುಖ್ಯ ರಸ್ತೆಯಲ್ಲಿ ಸುರಕ್ಷತಾ ಮುಚ್ಚಳ (ಸ್ಲ್ಯಾಬ್) ಇಲ್ಲದೆ ಚರಂಡಿ ತೆರೆದುಕೊಂಡಿದೆ. ಇದರಿಂದಾಗಿ ದ್ವಿಚಕ್ರ ವಾಹನ ಸವಾರರು ಹಾಗೂ ಆಟೋ ಚಾಲಕರು ನಿರಂತರವಾಗಿ ಅಪಘಾತದ ಭೀತಿಯಲ್ಲೇ ಸಂಚರಿಸುವಂತಾಗಿದೆ. ಅಧಿಕಾರಿಗಳ…