Skip to main content

Police Roundup

ಬೆಂಗಳೂರು ನಗರ ಜಿಲ್ಲೆಯಲ್ಲಿ ಬೃಹತ್ ಕಾರ್ಯಾಚರಣೆ: 23.33 ಕೋಟಿ ರೂ. ಮೌಲ್ಯದ 6 ಎಕರೆಗೂ ಅಧಿಕ ಸರ್ಕಾರಿ ಜಮೀನು ಒತ್ತುವರಿ ತೆರವು!

Share News

ಬೆಂಗಳೂರು: ರಾಜಧಾನಿ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಭೂಮಾಫಿಯಾಗೆ ಜಿಲ್ಲಾಡಳಿತವು ಭರ್ಜರಿ ಶಾಕ್ ನೀಡಿದೆ. ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ಅವರ ಖುದ್ದು ನೇತೃತ್ವದಲ್ಲಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಒತ್ತುವರಿಯಾಗಿದ್ದ ಬರೋಬ್ಬರಿ 23 ಕೋಟಿ 33 ಲಕ್ಷ ರೂ. ಮೌಲ್ಯದ 6 ಎಕರೆ 0.07 ಗುಂಟೆ ಸರ್ಕಾರಿ ಜಮೀನನ್ನು ಯಶಸ್ವಿಯಾಗಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

 

​ಬೆಂಗಳೂರು ನಗರ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳ ತಹಶೀಲ್ದಾರ್‌ಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ತಂಡಗಳು ಭಾನುವಾರ ಏಕಕಾಲದಲ್ಲಿ ತಮ್ಮ ವ್ಯಾಪ್ತಿಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಕಾಲುದಾರಿ, ಕುಂಟೆ, ಗೋಮಾಳ ಹಾಗೂ ಸ್ಮಶಾನ ಜಾಗಗಳ ಮೇಲೆ ದಾಳಿ ನಡೆಸಿ ಜೆಸಿಬಿಗಳ ಮೂಲಕ ಒತ್ತುವರಿ ತೆರವುಗೊಳಿಸಿದರು.

 

ಜಿಲ್ಲಾಧಿಕಾರಿಗಳ ಕಟ್ಟುನಿಟ್ಟಿನ ಆದೇಶದ ಮೇರೆಗೆ ಬೆಂಗಳೂರು ನಗರದ ಐದು ತಾಲೂಕುಗಳಲ್ಲಿ ನಡೆದ ಕಾರ್ಯಾಚರಣೆ.

 

ಬೆಂಗಳೂರು ಉತ್ತರ (ದಾಸನಪುರ ಹೋಬಳಿ) ಗೋಪಾಲಪುರ (ಸ.ನಂ 137) ಗೋಮಾಳ ಜಾಗ5.00 ಎಕರೆರೂ. 20.00 ಕೋಟಿ

ಬೆಂಗಳೂರು ಪೂರ್ವ (ವರ್ತೂರು ಹೋಬಳಿ) ಭೈರಸಂದ್ರ (ಸ.ನಂ 64) ಕುಂಟೆ0.16 ಗುಂಟೆರೂ. 1.80 ಕೋಟಿ

ಬೆಂಗಳೂರು ಪೂರ್ವ (ಬಿದರಹಳ್ಳಿ ಹೋಬಳಿ) ಚನ್ನಸಂದ್ರ (ಸ.ನಂ 22) ಕಾಲುದಾರಿ0.04 ಗುಂಟೆರೂ. 50.00 ಲಕ್ಷ

ಆನೇಕಲ್ (ಕಸಬಾ ಹೋಬಳಿ) ಕುಂಬಾರನಹಳ್ಳಿ (ಸ.ನಂ 14, 15, 16, 17) ಕಾಲುದಾರಿ0.04 ಗುಂಟೆರೂ. 8.00 ಲಕ್ಷ

ಯಲಹಂಕ (ಹೆಸರಘಟ್ಟ ಹೋಬಳಿ) ಬ್ಯಾಲಕೆರೆ (ಸ.ನಂ 130) ಗೋಮಾಳ ಜಾಗ0.15 ಗುಂಟೆರೂ. 75.00 ಲಕ್ಷ

ಬೆಂಗಳೂರು ದಕ್ಷಿಣ (ತಾವರೆಕೆರೆ ಹೋಬಳಿ) ದೊಡೇರಿ (ಸ.ನಂ 130) ಸ್ಮಶಾನ ಜಾಗ

 

ಸರ್ಕಾರಿ ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಗಳಿಗೆ ಮಾತ್ರ ಬಳಸಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಕಬಳಿಸಲು ಯತ್ನಿಸಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ. ಇಂದಿನ ಈ ಬೃಹತ್ ಕಾರ್ಯಾಚರಣೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಕಚೇರಿ ಸಹಾಯಕರು, ಆಯಾ ತಾಲೂಕುಗಳ ತಹಶೀಲ್ದಾರ್‌ಗಳು, ಕಂದಾಯ ಇನ್ಸ್‌ಪೆಕ್ಟರ್‌ಗಳು ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

 

​ದಶಕಗಳಿಂದ ಬೀಡುಬಿಟ್ಟಿರುವ ಭೂಗಳ್ಳರ ವಿರುದ್ಧ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ಅವರು ಕೈಗೊಂಡಿರುವ ಈ ದಿಟ್ಟ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin