Skip to main content

Police Roundup

ಟ್ರ್ಯಾಕ್ಟರ್ ಗೆ ಟಂಟಂ ಡಿಕ್ಕಿ ಹೊಡೆದು ಕೂಲಿ ಕಾರ್ಮಿಕ ಸಾವು ಹಲವರಿಗೆ ಗಾಯ

Share News

ವಿಜಯಪುರ: ಜಿಲ್ಲೆಯ ದೇವರಹಿಪ್ಪರಗಿ ಸಮೀಪವಿರುವ ಡವಳಾರ ಕ್ರಾಸ್ ಹತ್ತಿರ ನಿಂತ ಟ್ರ್ಯಾಕ್ಟರ್ ಗೆ ಟಂಟಂ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೂಲಿ ಕಾರ್ಮಿಕರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 

ಮೃತರನ್ನು ಕಲಕೇರಿ ತಾಂಡಾ ಗ್ರಾಮದ ಥಾವರು ದೀಪು ಚವ್ಹಾಣ (55) ಎಂದು ಗುರುತಿಸಲಾಗಿದೆ.ಕಲಕೇರಿಯಿಂದ ಗುಬ್ಬೇವಾಡ ಗ್ರಾಮಕ್ಕೆ ಕೆಲಸ ಮಾಡಲು 6ಜನ ಕೂಲಿ ಕಾರ್ಮಿಕರೊಂದಿಗೆ ಟಂಟಂ ವಾಹನ ಮೂಲಕ ಹೋಗುವ ದಾರಿ ಮಧ್ಯೆ ನಿಂತ ಟ್ರಾಕ್ಟರ್ ಗೆ ಗುದ್ದಿದ ಪರಿಣಾಮ ಒಬ್ಬ ಕೂಲಿ ಕಾರ್ಮಿಕ ಸ್ಥಳದಲ್ಲಿ ಮೃತಪಟ್ಟಿದ್ದಾನೆ ಹಾಗೂ ಹಲವಾರು ಗಾಯಗೊಂಡ ಸಿಂದಗಿ ಸರ್ಕಾರಿ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ದಾಖಲಿಸಲಾಗಿದೆ.

 

ರಸ್ತೆ ಮೇಲೆ ಟ್ರಾಕ್ಟರ್ ನಿಲ್ಲಿಸಿ ಹೊಗಿದ್ದು ಘಟನೆಗೆ ಕಾರಣ ಎಂದು ಹಾಗೂ ಟಂಟಂ ಹೊಸ ನಂಬರ್ ಇಲ್ಲದ ವಾಹನ ಎನ್ನಲಾಗಿದೆ,ಚಾಲಕ ಪರಾರಿಯಾಗಿದ್ದು.

 

ರಸ್ತೆ ಸಂಚಾರಕ್ಕೆ ಪಿಎಸ್ಐ ಮಂಟೂರ ಹಾಗೂ ಸಿಬ್ಬಂದಿ ವರ್ಗ ಅನುವು ಮಾಡಿಕೊಟ್ಟರು.

 

ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿ ಕುಟುಂಬ ಸದಸ್ಯರು ಒಬ್ಬರನ್ನೊಬ್ಬರು ಅಪ್ಪಿಕೊಂಡು ರೋದಿಸುತ್ತಿರುವ ದೃಶ್ಯಗಳು ಮನಕಲಕುವಂತಿವೆ.

 

ಕಲಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.ಮೃತರ ಪತ್ನಿ ನೀಡಿದ ದೂರಿನ ಮೇರೆಗೆ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ವರದಿ – ಗುಂಡು ಕುಲಕರ್ಣಿ ವಿಜಯಪುರ


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin