Skip to main content

Police Roundup

ಶಿಥಿಲಗೊಂಡ ಮನೆ, ಕುಸಿಯುವ ಭೀತಿಯಲ್ಲಿ ಕುಟುಂಬ – ವಸತಿ ಸೌಲಭ್ಯಕ್ಕಾಗಿ ಅಧಿಕಾರಿಗಳಿಗೆ ಮನವಿ

Share News

ಕೃಷ್ಣರಾಜಪೇಟೆ: ತಾಲೂಕಿನ ನಾರ್ಗೋನಹಳ್ಳಿ ಗ್ರಾಮದಲ್ಲಿ ಹಳೆಯ ಮನೆಯ ಮೇಲ್ಚಾವಣಿ ಹಾಗೂ ಗೋಡೆಗಳು ಕುಸಿದು ಬಿದ್ದಿದ್ದು, ಮಂಜುಳಾ ಸಣ್ಣರಾಜು ಅವರ ಕುಟುಂಬ ತೀವ್ರ ಆತಂಕದ ವಾತಾವರಣದಲ್ಲಿ ದಿನ ದೂಡುವಂತಾಗಿದೆ.

 

​ಸುಮಾರು 25 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಈ ಮನೆಯ ಗೋಡೆಗಳು ಸಂಪೂರ್ಣ ಶಿಥಿಲಗೊಂಡಿದ್ದು, ಮೇಲ್ಚಾವಣಿಯೂ ಹಾನಿಯಾಗಿದೆ. ಮಳೆ ಹಾಗೂ ಪ್ರತಿಕೂಲ ಹವಾಮಾನದ ಸಂದರ್ಭದಲ್ಲಿ ಯಾವ ಕ್ಷಣದಲ್ಲಿ ಮನೆ ಕುಸಿದು ಬೀಳುತ್ತದೆಯೋ ಎಂಬ ಭಯದಲ್ಲೇ ಕುಟುಂಬಸ್ಥರು ಕಾಲ ಕಳೆಯುತ್ತಿದ್ದಾರೆ.

 

​ಅಧಿಕಾರಿಗಳ ಅಲೆದಾಟ, ಪರಿಹಾರ ಸಿಗದ ನಿರಾಶೆ:

ಸುರಕ್ಷಿತ ವಾಸಸ್ಥಳ ಹಾಗೂ ಸರ್ಕಾರದ ವಸತಿ ಯೋಜನೆಯಡಿ ನೂತನ ಮನೆ ಮಂಜೂರು ಮಾಡುವಂತೆ ಮಂಜುಳಾ ಸಣ್ಣರಾಜು ಅವರು ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ಮತ್ತು ತಾಲೂಕು ಕಚೇರಿಗಳಿಗೆ ಅಲೆದಾಡಿದ್ದರೂ ಯಾವುದೇ ಶಾಶ್ವತ ಪರಿಹಾರ ಸಿಕ್ಕಿಲ್ಲ. “ಅಧಿಕಾರಿಗಳನ್ನು ಭೇಟಿ ಮಾಡಿದರೆ ಕೇವಲ ₹5,000 ರಿಂದ ₹6,000 ನೀಡುವುದಾಗಿ ಹೇಳಿ ಕಳುಹಿಸುತ್ತಿದ್ದಾರೆ. ಈ ಅಲ್ಪ ಮೊತ್ತದಲ್ಲಿ ಮನೆಯನ್ನು ದುರಸ್ತಿ ಮಾಡಲು ಅಥವಾ ಹೊಸ ಮನೆ ನಿರ್ಮಿಸಲು ಸಾಧ್ಯವಿಲ್ಲ” ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.

 

​ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಸಕ್ಕೆ ಯೋಗ್ಯವಲ್ಲದ ಈ ಮನೆಯ ವಾಸ್ತವ ಸ್ಥಿತಿಯನ್ನು ಅರಿತು ಸರ್ಕಾರದ ಯೋಜನೆಯಡಿ ಹೊಸ ಮನೆ ಮಂಜೂರು ಮಾಡಿಕೊಡಬೇಕೆಂದು ಪತ್ರಿಕಾ ಮಾಧ್ಯಮದ ಮೂಲಕ ಮನವಿ ಮಾಡಿದ್ದಾರೆ.

 

​ಈ ಸಂದರ್ಭದಲ್ಲಿ ಮಂಜುಳಾ ಸಣ್ಣರಾಜು, ವರುಣ್ ಹಾಗೂ ಕುಟುಂಬದ ಇತರ ಸದಸ್ಯರು ಉಪಸ್ಥಿತರಿದ್ದರು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin