Skip to main content

Police Roundup

ಗಿರಿನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: ೧೮.೨೬ ಕೋಟಿ ರೂ. ಮೌಲ್ಯದ ಎಂಡಿಎಂಎ ಸಹಿತ ನೈಜೀರಿಯಾ ಪ್ರಜೆ ಬಂಧನ

Share News

ಬೆಂಗಳೂರು: ನಗರದಲ್ಲಿ ಅಕ್ರಮ ಡ್ರಗ್ಸ್ ಮಾರಾಟ ಜಾಲದ ವಿರುದ್ಧ ಸಮರ ಮುಂದುವರಿಸಿರುವ ಗಿರಿನಗರ ಠಾಣೆ ಪೊಲೀಸರು, ಭರ್ಜರಿ ಕಾರ್ಯಾಚರಣೆ ನಡೆಸಿ ಬೃಹತ್ ಪ್ರಮಾಣದ ಎಂಡಿಎಂಎ (MDMA) ಸೈಕೋಟ್ರೋಪಿಕ್ ವಸ್ತುವಿನೊಂದಿಗೆ ನೈಜೀರಿಯಾ ಮೂಲದ ಪೆಡ್ಲರ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

​ನೈಜೀರಿಯಾ ಪ್ರಜೆ ಪೀಟರ್ ಆಲ್ಫ್ರಿಡ್ (೩೭) ಬಂಧಿತ ಆರೋಪಿ.

 

​ಮನೆಯಲ್ಲಿ ಚೂಡಿದಾರ್‌ನಲ್ಲಿ ಬಾಂಧಿಸಿಟ್ಟಿದ್ದ ಡ್ರಗ್ಸ್:

ಬ್ಯುಸಿನೆಸ್ ವಿಸಾ ಅಡಿಯಲ್ಲಿ ಭಾರತಕ್ಕೆ ಆಗಮಿಸಿದ್ದ ಆರೋಪಿಯು, ದೆಹಲಿಯಿಂದ ಡ್ರಗ್ಸ್ ತರಿಸಿಕೊಂಡು ನಗರದಲ್ಲಿ ಅಕ್ರಮ ಮಾರಾಟ ಜಾಲ ನಡೆಸುತ್ತಿದ್ದ. ವಿಶೇಷವೆಂದರೆ, ಪೊಲೀಸರಿಗೆ ಅನುಮಾನ ಬಾರದಂತೆ ತಾನು ವಾಸವಿದ್ದ ಮನೆಯಲ್ಲಿ ಮಹಿಳೆಯರ ‘ಚೂಡಿದಾರ್’ ಉಡುಪುಗಳ ಒಳಗಡೆ ಡ್ರಗ್ಸ್ ಬಾಂಧಿಸಿ ಬಚ್ಚಿಟ್ಟಿದ್ದ.

 

​ವಿದ್ಯಾರ್ಥಿಗಳೇ ಟಾರ್ಗೆಟ್:

ಆರೋಪಿಯು ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಕರನ್ನು ಗುರಿಯಾಗಿಸಿಕೊಂಡು ಡ್ರಗ್ ಡೀಲಿಂಗ್ ಮಾಡುತ್ತಿದ್ದ. ಪಕ್ಕಾ ಮಾಹಿತಿ ಆಧರಿಸಿ ಡ್ರಗ್ ಸರಬರಾಜು ಮಾಡುವ ಸಮಯದಲ್ಲೇ ದಾಳಿ ನಡೆಸಿದ ಗಿರಿನಗರ ಪೊಲೀಸರು ಆರೋಪಿಯನ್ನು ರೆಡ್‌ಹ್ಯಾಂಡ್ ಆಗಿ ಬಂಧಿಸಿದ್ದಾರೆ.

 

​೧೮.೨೬ ಕೋಟಿ ರೂ. ಮೌಲ್ಯದ ಎಂಡಿಎಂಎ ಜಪ್ತಿ:

ಬಂಧಿತನಿಂದ ಸುಮಾರು ೧೮.೨೬ ಕೋಟಿ ರೂಪಾಯಿ ಮೌಲ್ಯದ ೯ ಕೆಜಿ ಎಂಡಿಎಂಎ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಇದೇ ಮೊದಲ ಬಾರಿಗೆ ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿದ್ದು, ಈ ಹಿಂದೆ ಆತನ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಎಂಬುದು ತನಿಖೆಯಿಂದ ತಿಳಿದುಬಂದಿದೆ.

 

​ಪ್ರಕರಣಕ್ಕೆ ಸಂಬಂಧಿಸಿದಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಜಾಲದ ಹಿನ್ನೆಲೆ ಹಾಗೂ ಇತರ ಜಾಲಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin