ಜನರ ಮುಗ್ಧತೆ ಹಾಗೂ ಸ್ನೇಹವನ್ನೇ ಬಂಡವಾಳ ಮಾಡಿಕೊಂಡು, ನಂಬಿದ ಗೆಳೆಯನಿಗೇ ಲಕ್ಷಾಂತರ ರೂಪಾಯಿ ನಾಮ ಹಾಕಿ ರಾತ್ರೋರಾತ್ರಿ ಮನೆ ಖಾಲಿ ಮಾಡಿ ವ್ಯಕ್ತಿಯೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ನಿವಾಸಿಯಾದ ಸಮಲ್ ರಾಜ್ (ಶ್ಯಾಮಲ ರಾಜ) ಎಂಬಾತನೇ ಈ ವಂಚನೆ ಎಸಗಿ ತಲೆಮರೆಸಿಕೊಂಡಿರುವ ಕಿಲಾಡಿ ವಂಚಕ. ಆರೋಪಿ ಸಮಲ್ ರಾಜ್‌ನ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತವಾಗಿದೆ. ಮೇಲ್ನೋಟಕ್ಕೆ ಶ್ರೀಮಂತರ ಹಾಗೂ ಪ್ರಭಾವಿ ವ್ಯಕ್ತಿಗಳೊಂದಿಗೆ ಆತ್ಮೀಯ ಸ್ನೇಹ ಬೆಳೆಸುವ…
“ಹೆತ್ತ ಕರುಳನ್ನು ಕಳೆದುಕೊಂಡ ನೋವು ಜಗತ್ತಿನ ಯಾವುದೇ ತಾಯಿಗೂ ಭರಿಸಲಾಗದಂತದ್ದು.” ಆದರೆ, ಆ ವೈಯಕ್ತಿಕ ದುಃಖದ ಕಣ್ಣೀರಿನಲ್ಲೇ ಮುಳುಗಿಹೋಗದೆ, ತನ್ನ ನೋವನ್ನು ಸಮಾಜದ ಒಳಿತಿಗಾಗಿ ಧಾರೆ ಎರೆದ 50 ವರ್ಷದ ಮಹಿಳೆಯೊಬ್ಬರ ಕಥೆ ಇಂದು ಇಡೀ ಸಮಾಜಕ್ಕೆ ಮಾದರಿಯಾಗಿದೆ. ತನ್ನ ಎಳೆಯ ಮಗನನ್ನು ಕಳೆದುಕೊಂಡ ಈ ಮಾತೆ, ಇಂದು ಇಡೀ ಗ್ರಾಮದ ನೂರಾರು ಬಡ ಮಕ್ಕಳಿಗೆ ತಾಯಿಯಾಗಿದ್ದಾರೆ. ತನ್ನ ಮಗನ ಅಗಲಿಕೆಯ ನಂತರ ಶೂನ್ಯವಾಗಿದ್ದ ಜೀವನದಲ್ಲಿ ಈ ಮಹಿಳೆ ಧೃತಿಗೆಡಲಿಲ್ಲ. ತನ್ನ ಮಗನ ನೆನಪನ್ನು ಅಮರವಾಗಿಸಲು…