ಆರೂರ್ (ಕೇರಳ): ಹೊಸ ಪುಸ್ತಕ, ಹೊಸ ಸಮವಸ್ತ್ರ ಧರಿಸಿ ಸಡಗರದಿಂದ 8ನೇ ತರಗತಿ ಮೆಟ್ಟಿಲು ಹತ್ತಬೇಕಿದ್ದ 13 ವರ್ಷದ ವಿದ್ಯಾರ್ಥಿನಿಯೊಬ್ಬಳು ಹಾವಿನ ಕಡಿತವನ್ನು ಇರುವೆ ಕಡಿತವೆಂದು ನಿರ್ಲಕ್ಷಿಸಿದ ಕಾರಣ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಧೃತಿಗೆಡಿಸುವ ಘಟನೆ ಕೇರಳದ ಆರೂರ್‌ನಲ್ಲಿ ನಡೆದಿದೆ. ಆರೂರ್ ಸೇಂಟ್ ಆಗಸ್ಟೀನ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ನಿಯಾ ಲೆನಿನ್ (13) ಮೃತಪಟ್ಟ ದುರ್ದೈವಿ. ಹಾವಿನ ವಿಷ ದೇಹಕ್ಕೆ ವ್ಯಾಪಿಸಿ 24 ದಿನಗಳ ಕಾಲ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡಿದ ಬಾಲಕಿ ಭಾನುವಾರ ಬೆಳಿಗ್ಗೆ…
ಕೋಯಿಕ್ಕೋಡ್: ಅಧಿಕಾರ, ಕಾನೂನು ಹಾಗೂ ಇಲಾಖೆಯ ಕಠಿಣ ನಿಯಮಗಳ ನಡುವೆಯೂ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ನೆರೆರಾಜ್ಯ ಕೇರಳದಲ್ಲಿ ನಡೆದ ಈ ಹೃದಯಸ್ಪರ್ಶಿ ಘಟನೆಯೇ ಸಾಕ್ಷಿ. ಸಾಲ ವಸೂಲಾತಿಗಾಗಿ ಬಡ ಕುಟುಂಬವೊಂದರ ಮನೆ ಜಪ್ತಿ ಮಾಡಲು ಹೋದ ಸರ್ಕಾರಿ ಬ್ಯಾಂಕ್ ಅಧಿಕಾರಿಯೊಬ್ಬರು, ಅಲ್ಲಿನ ಕಡು ಬಡತನವನ್ನು ಕಂಡು ಕರಗಿ, ಆ ಕುಟುಂಬದ ಸಂಪೂರ್ಣ ಸಾಲವನ್ನು ತಾವೇ ತೀರಿಸುವ ಮೂಲಕ ತಮ್ಮ ನಿವೃತ್ತಿಯ ದಿನದಂದೇ ಮನೆಯ ಮೂಲ ಪತ್ರಗಳನ್ನು ವಾಪಸ್ ನೀಡಿ ಎಲ್ಲರ ಮನ ಗೆದ್ದಿದ್ದಾರೆ. ಕೊಯಿಲಾಂಡಿ ಸಹಕಾರ…