ಕಾಕಿನಾಡ:ಇನ್‌ಸ್ಟಾಗ್ರಾಮ್‌ನಲ್ಲಿ ಕಂಡ ಅಡುಗೆ ವಿಡಿಯೋವೊಂದನ್ನು ಅನುಸರಿಸಿ ವಿಷಕಾರಿ ‘ಉಮ್ಮತ್ತಿ ಹೂವಿನ’ ಸಾರು ಸೇವಿಸಿದ ಒಂದೇ ಕುಟುಂಬದ ನಾಲ್ವರು ಸದಸ್ಯರು ಪ್ರಾಣಾಪಾಯಕ್ಕೆ ಸಿಲುಕಿದ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಎರ್ಲಂಪಾಲೆಂ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿಗಳಾದ ವೀರಲಕ್ಷ್ಮಿ, ಗಂಗಾಭವಾನಿ, ಜಯಲಕ್ಷ್ಮಿ ಮತ್ತು ವೀರಬ್ಬುಲು ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ಅಡುಗೆಯ ವಿಡಿಯೋವೊಂದನ್ನು ವೀಕ್ಷಿಸಿದ್ದರು. ಆ ವಿಡಿಯೋದಲ್ಲಿ “ಉಮ್ಮತ್ತಿ ಹೂವನ್ನು (Datura Flower) ಬೇಳೆ ಸಾರಿನಲ್ಲಿ ಬಳಸಿ ಸೇವಿಸಿದರೆ ಆರೋಗ್ಯಕ್ಕೆ ಉತ್ತಮ” ಎಂಬ ತಪ್ಪು ಮಾಹಿತಿಯನ್ನು ನೀಡಲಾಗಿತ್ತು. ಇದನ್ನು ನಿಜವೆಂದು ನಂಬಿದ ಕುಟುಂಬಸ್ಥರು,…
ಕೋಲ್ಕತ್ತಾ: ರಾಜಕೀಯ ಅಂದರೆ ಕೇವಲ ಹಣವಂತರು ಅಥವಾ ಪ್ರಭಾವಿಗಳ ಅಖಾಡ ಎಂಬ ಕಾಲವೊಂದಿತ್ತು. ಆದರೆ, ಪಶ್ಚಿಮ ಬಂಗಾಳದಲ್ಲಿ ಸಾಮಾನ್ಯ ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಇಂದು ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ. ಅವರೇ ಬಿಜೆಪಿಯ ಕಲಿತಾ ಮಾಝಿ. ₹3000 ಸಂಬಳಕ್ಕೆ ಮನೆಗೆಲಸ: ಕೆಲವೇ ದಿನಗಳ ಹಿಂದಿನವರೆಗೂ ಕಲಿತಾ ಮಾಝಿ ಅವರ ಬದುಕು ಅತ್ಯಂತ ಕಷ್ಟಕರವಾಗಿತ್ತು. ಪರರ ಮನೆಗಳಿಗೆ ಹೋಗಿ ಪಾತ್ರೆ ತೊಳೆಯುವುದು, ಕಸ ಬಳಿಯುವ ಕೆಲಸ ಮಾಡುತ್ತಿದ್ದ ಇವರಿಗೆ ತಿಂಗಳಿಗೆ ಸಿಗುತ್ತಿದ್ದ ಸಂಬಳ ಕೇವಲ…