ಮಂಡ್ಯ: ಹಲವು ವರ್ಷಗಳಿಂದ ಭಿಕ್ಷಾಟನೆ ನಡೆಸುತ್ತಿದ್ದ ವೃದ್ಧೆಯೊಬ್ಬರು ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದು, ಅವರ ಮನೆಯಲ್ಲಿ ಬರೋಬ್ಬರಿ ೩೦ ಲಕ್ಷ ರೂಪಾಯಿಗೂ ಅಧಿಕ ಹಣ ಪತ್ತೆಯಾಗಿರುವ ಬೆರಗುಗೊಳಿಸುವ ಘಟನೆ ಮಂಡ್ಯ ನಗರದ ಗುತ್ತಲು ಬಡಾವಣೆಯಲ್ಲಿ ನಡೆದಿದೆ. ಮೃತ ವೃದ್ಧೆಯನ್ನು ನೂರ್ ಎಂದು ಗುರುತಿಸಲಾಗಿದೆ. ಕುಟುಂಬಸ್ಥರು ತನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಈಕೆ ಕಳೆದ ಹಲವು ವರ್ಷಗಳಿಂದ ಗುತ್ತಲು ಬಡಾವಣೆ ಹಾಗೂ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ನಡೆಸುತ್ತಿದ್ದರು. ಭಿಕ್ಷಾಟನೆಯಿಂದ ಬಂದ ಹಣವನ್ನು ಯಾರೂ ಇಲ್ಲದ…
ದಾವಣಗೆರೆ: ಕೌಟುಂಬಿಕ ಭಿನ್ನಾಭಿಪ್ರಾಯಗಳಿಂದಾಗಿ ವೈವಾಹಿಕ ಜೀವನಕ್ಕೆ ಅಂತ್ಯಹಾಡಲು ವಿಚ್ಛೇದನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ 37 ದಂಪತಿ, ನ್ಯಾಯಾಧೀಶರ ಯಶಸ್ವಿ ಸಮಾಲೋಚನೆಯಿಂದ ತಮ್ಮೆಲ್ಲ ವಿವಾದಗಳನ್ನು ಮರೆತು ಮತ್ತೆ ಒಂದಾಗಿದ್ದಾರೆ. ನ್ಯಾಯಾಧೀಶರ ಮಾರ್ಗದರ್ಶನ ಹಾಗೂ ಸಮಾಲೋಚನೆ: ವೈವಾಹಿಕ ಭಿನ್ನಾಭಿಪ್ರಾಯಗಳಿಂದಾಗಿ ಬೇರ್ಪಡಲು ನಿರ್ಧರಿಸಿದ್ದ ದಂಪತಿಗೆ ನ್ಯಾಯಾಧೀಶರು ಕೌಟುಂಬಿಕ ಸಂಬಂಧಗಳ ಮಹತ್ವ, ಪರಸ್ಪರ ಗೌರವ, ನಂಬಿಕೆ ಹಾಗೂ ಹೊಂದಾಣಿಕೆಯ ಅತ್ಯಗತ್ಯತೆಯನ್ನು ಅತ್ಯಂತ ಸಮಾಧಾನದಿಂದ ಮನವರಿಕೆ ಮಾಡಿಕೊಟ್ಟರು. ನ್ಯಾಯಾಧೀಶರ ಈ ಸತತ ಮಾನವೀಯ ಸ್ಪಂದನೆ ಮತ್ತು ಮಾರ್ಗದರ್ಶನದಿಂದ ಪ್ರೇರಿತರಾದ ದಂಪತಿಗಳು ಹೊಸ ಜೀವನ…