ಸಾಮಾಜಿಕ ಜಾಲತಾಣಗಳು ಪ್ರತಿಭೆ ಹಾಗೂ ಕೌಶಲ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆಯಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ದುರ್ಬಳಕೆಗೂ ಹಾದಿಯಾಗುತ್ತಿರುವುದು ವಿಪರ್ಯಾಸ. ಇತ್ತೀಚೆಗೆ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ರೌಡಿಶೀಟರ್ ಜೊತೆ ನಡೆಸಿದ ವೀಡಿಯೋ ಕಾಲ್ ಹಾಗೂ ಅದರ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಖಾಕಿ ಯೂನಿಫಾರ್ಮ್ ಮತ್ತು ನೈತಿಕತೆಯ ಪ್ರಶ್ನೆ: ವ್ಯಕ್ತಿಗತ ಸ್ವಾತಂತ್ರ್ಯದ ಹಕ್ಕಿನಡಿ ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಇಷ್ಟದಂತೆ ನಡೆದುಕೊಳ್ಳುವ ಹಕ್ಕಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಪವಿತ್ರವಾದ ಪೊಲೀಸ್ ಸಮವಸ್ತ್ರದಲ್ಲಿದ್ದುಕೊಂಡು…
ಮಾನ್ವಿ: ಪಟ್ಟಣದ ಐತಿಹಾಸಿಕ ಹಿನ್ನೆಲೆಯುಳ್ಳ ಕಿಲ್ಲಾ ಪ್ರದೇಶದಲ್ಲಿ ಮನೆಯೊಂದರ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಬೃಹತ್ ಪ್ರಮಾಣದ ಪುರಾತನ ತಾಮ್ರದ ನಾಣ್ಯಗಳು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯ ನಿರ್ಮಾಣ ಕಾಮಗಾರಿಗಾಗಿ ಜಾಗವನ್ನು ಅಗೆಯುತ್ತಿದ್ದಾಗ ಒಟ್ಟು 360 ತಾಮ್ರದ ನಾಣ್ಯಗಳು ದೊರೆತಿವೆ. ಈ ನಾಣ್ಯಗಳ ಮೇಲೆ ಉರ್ದು ಭಾಷೆಯ ಲಿಪಿಯ ಬರಹಗಳಿದ್ದು, ಇವು ಐತಿಹಾಸಿಕ ಕಾಲಘಟ್ಟದಲ್ಲಿ ಚಲಾವಣೆಯಲ್ಲಿದ್ದ ಅಪರೂಪದ ನಾಣ್ಯಗಳಾಗಿರಬಹುದು ಎಂದು ಶಂಕಿಸಲಾಗಿದೆ. ಅಧಿಕಾರಿಗಳ ಭೇಟಿ ಮತ್ತು ವಶ: ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮಾನ್ವಿ ತಹಶೀಲ್ದಾರ್…