ಆನೇಕಲ್: ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಹಾಗಡೆ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಸಮವಸ್ತ್ರ, ಶಾಲಾ ಬ್ಯಾಗ್ ಹಾಗೂ ಅಗತ್ಯ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು. ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹಾಗೂ ಶೈಕ್ಷಣಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ದಾನಿಗಳ ಪ್ರೋತ್ಸಾಹ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ತಿಲಕ್ ಕುಮಾರ್ ಗೌಡ ಹಾಗೂ ಗುತ್ತಿಗೆದಾರ ಆನಂದ್ ಅವರ ನೇತೃತ್ವದಲ್ಲಿ ಈ ಸಮಾಜಮುಖಿ ಕಾರ್ಯ ನಡೆದಿದೆ. ”ಖಾಸಗಿ…
ನೆಲಮಂಗಲ: ಪತ್ನಿ ಮತ್ತು ನವಜಾತ ಮಗುವನ್ನು ನೋಡಿಕೊಂಡು ಮನೆಗೆ ಮರಳುತ್ತಿದ್ದ ಯುವಕನೊಬ್ಬ ಭೀಕರ ಹಿಟ್ ಆ್ಯಂಡ್ ರನ್ ಅಪಘಾತಕ್ಕೆ ಬಲಿಯಾಗಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹುಸ್ಕೂರು ರಸ್ತೆಯಲ್ಲಿ ಸಂಭವಿಸಿದೆ. ಘಟನೆಯ ವಿವರ ಮೃತ ಯುವಕ: ದಾಸನಪುರ ತಾಲೂಕಿನ ಮುನಿಚಪ್ಪನಪಾಳ್ಯ ನಿವಾಸಿ ಅಭಿಷೇಕ್ (27). ಹಿನ್ನೆಲೆ: ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಅಭಿಷೇಕ್, ಚಿಕ್ಕಬೆಳವಂಗಲದಲ್ಲಿದ್ದ ಪತ್ನಿಯ ಬಾಣಂತನ ಹಾಗೂ ಮಗುವನ್ನು ನೋಡಿ ದಾಸನಪುರದ ತಮ್ಮ ಮನೆಗೆ ಬೈಕ್‌ನಲ್ಲಿ ವಾಪಸ್ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ….