Skip to main content

Police Roundup

Day: September 14, 2026

ಎಐ ಕ್ಯಾಮೆರಾ ಯಡವಟ್ಟು: ಕಾರು ಚಾಲಕನಿಗೆ ‘ಹೆಲ್ಮೆಟ್‌ ಧರಿಸಿಲ್ಲ’ ಎಂದು ₹500 ದಂಡ ಹಾಕಿದ ಸಂಚಾರ ಪೊಲೀಸ್!

ಚಿಕ್ಕೋಡಿ: ಸಂಚಾರ ನಿಯಮ ಉಲ್ಲಂಘನೆ ತಡೆಯಲು ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆಯ (AI) ಕ್ಯಾಮೆರಾವೊಂದು ಮಾಡಿದ ಎಡವಟ್ಟಿನಿಂದಾಗಿ ಕಾರು ಮಾಲೀಕರೊಬ್ಬರು ತಬ್ಬಿಬ್ಬಾದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ.   ​ಅಥಣಿ ಪಟ್ಟಣದ ನಿವಾಸಿ ಸುಭಾಷ್ ಬೋಜನೆ ಎಂಬುವವರೇ ಈ ವಿಚಿತ್ರ ದಂಡದ ನೋಟಿಸ್‌ಗೆ ಒಳಗಾದ ಕಾರು ಮಾಲೀಕ.   ​ಘಟನೆಯ ವಿವರ: ಪಟ್ಟಣದ ಅಂಬೇಡ್ಕರ್ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಸುಭಾಷ್ ಅವರ ಕಾರಿನ ಫೋಟೊವನ್ನು ಸೆರೆಹಿಡಿದಿದ್ದ ಎಐ ಕ್ಯಾಮೆರಾ, ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂದು ಇ-ಚಲನ್ ಜನರೇಟ್ ಮಾಡಿತ್ತು….

Read More

ಗೌರಿ-ಗಣೇಶ ಹಬ್ಬ: ಕೊಪ್ಪಳ ಜಿಲ್ಲೆಯಲ್ಲಿ 4 ದಿನ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ

ಕೊಪ್ಪಳ: 2026ನೇ ಸಾಲಿನ ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಶಾಂತಿ, ಸೌಹಾರ್ದತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಪ್ಟೆಂಬರ್ 14 ರಿಂದ 20 ರ ನಡುವೆ ನಾಲ್ಕು ದಿನಗಳ ಕಾಲ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಆದೇಶ ಹೊರಡಿಸಿದ್ದಾರೆ.   ​ಹಬ್ಬದ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಮುನ್ನೆಚ್ಚರಿಕೆ ವಹಿಸಲು ಜಿಲ್ಲಾ ಪೊಲೀಸ್ ಅಧೀಕ್ಷಕರು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧರಿಸಿ, ಕರ್ನಾಟಕ ಅಬಕಾರಿ ಕಾಯ್ದೆ 1965ರ…

Read More

Solverwp- WordPress Theme and Plugin