Skip to main content

Police Roundup

ಅಕ್ರಮ ದಾಸ್ತಾನು: ಬೆಂಗಳೂರಿನಲ್ಲಿ ₹4 ಲಕ್ಷಕ್ಕೂ ಅಧಿಕ ಮೌಲ್ಯದ ಔಷಧ ಜಪ್ತಿ ಇ-ಕಾಮರ್ಸ್ ಗೋದಾಮುಗಳು!

Share News

ಬೆಂಗಳೂರು: ಪರವಾನಗಿ ಇಲ್ಲದೆ ಅಕ್ರಮವಾಗಿ ಔಷಧಗಳನ್ನು ದಾಸ್ತಾನು ಮಾಡಿದ್ದ ಇ-ಕಾಮರ್ಸ್ ಸಂಸ್ಥೆಗಳ ಗೋದಾಮುಗಳ ಮೇಲೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಭಾನುವಾರ ದಿಢೀರ್ ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ವೇಳೆ ನಿಯಮಬಾಹಿರವಾಗಿ ಸಂಗ್ರಹಿಸಿಡಲಾಗಿದ್ದ ₹4 ಲಕ್ಷಕ್ಕೂ ಅಧಿಕ ಮೌಲ್ಯದ ಔಷಧಗಳನ್ನು ಜಪ್ತಿ ಮಾಡಲಾಗಿದೆ.

 

​ಇಲಾಖೆಯ ಅಮಲುಜಾರಿ ಔಷಧ ವಿಭಾಗದ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ನಗರದ ಪ್ರಮುಖ ಎರಡು ಭಾಗಗಳಲ್ಲಿರುವ ಗೋದಾಮುಗಳ ಮೇಲೆ ಪರಿಶೀಲನೆ ನಡೆಸಲಾಯಿತು.

 

​ದಾಳಿಯ ವಿವರಗಳು:

​ಆನೇಕಲ್ (ತಟ್ಟನಹಳ್ಳಿ): ರಾಜ್ಯ ಗುಪ್ತದಳ ವಿಭಾಗದ ಸಹಾಯಕ ಔಷಧ ನಿಯಂತ್ರಕರಾದ ಮನೋಹರ್ ಮತ್ತು ಔಷಧ ಪರಿವೀಕ್ಷಕರ ತಂಡವು ತಟ್ಟನಹಳ್ಳಿಯಲ್ಲಿರುವ ‘ಮೆಸರ್ಸ್ ಅಮೆಜಾನ್ ಸೆಲ್ಲರ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್’ ಗೋದಾಮಿನ ಮೇಲೆ ದಾಳಿ ನಡೆಸಿ, ಸೂಕ್ತ ಪರವಾನಗಿ ಇಲ್ಲದೆ ಸಂಗ್ರಹಿಸಿಟ್ಟಿದ್ದ ₹2.45 ಲಕ್ಷ ಮೌಲ್ಯದ ಔಷಧಗಳನ್ನು ವಶಪಡಿಸಿಕೊಂಡಿದೆ.

 

​ದೇವನಹಳ್ಳಿ (ಏರೋಸ್ಪೇಸ್): ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಔಷಧ ಪರಿವೀಕ್ಷಕಿ ವಿಭಾ ಹಾಗೂ ಅವರ ತಂಡವು ದೇವನಹಳ್ಳಿಯ ಏರೋಸ್ಪೇಸ್‌ನಲ್ಲಿರುವ ‘ಮೆಸರ್ಸ್ ಅಮೆಜಾನ್’ ಸಂಸ್ಥೆಯ ಗೋದಾಮಿನ ಮೇಲೆ ದಾಳಿ ನಡೆಸಿ, ₹1.57 ಲಕ್ಷ ಮೌಲ್ಯದ ಅಕ್ರಮ ದಾಸ್ತಾನನ್ನು ಜಪ್ತಿ ಮಾಡಿದೆ.

 

​ಪರವಾನಗಿ ರಹಿತವಾಗಿ ಹಾಗೂ ಕಾನೂನುಬಾಹಿರವಾಗಿ ಔಷಧಗಳನ್ನು ದಾಸ್ತಾನು ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಲಾಖೆಯು ನಿಯಮೋಲ್ಲಂಘನೆ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin