ರಾಣೇಬೆನ್ನೂರು: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ನಿಯಮಗಳನ್ನು ಉಲ್ಲಂಘಿಸಿ, ಸೂಕ್ತವಾಗಿ ಪ್ಯಾಕ್ ಮಾಡದೆ ಸಾಗಿಸುತ್ತಿದ್ದ ಒಟ್ಟು ೧,೦೩೩ ಕೆ.ಜಿ. ಕೋಳಿ ಮಾಂಸವನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಬೆಂಗಳೂರಿನ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆದೇಶದಂತೆ, ಹಾವೇರಿ ಜಿಲ್ಲಾ ಅಂಕಿತಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಧಿಕಾರಿಗಳು ರಾಣೇಬೆನ್ನೂರು ತಹಶೀಲ್ದಾರರೊಂದಿಗೆ ಆಯೋಜಿಸಿದ್ದ ಜಂಟಿ ಕಾರ್ಯಾಚರಣೆಯಲ್ಲಿ ಆ.೧೩ರಂದು ತಾಲೂಕಿನ ವಿವಿಧ ಮಾಂಸ ಸಂಸ್ಕರಣಾ ಘಟಕಗಳ ಮೇಲೆ ದಾಳಿ ನಡೆಸಿ ಈ ಪರಿಶೀಲನೆ ನಡೆಸಿದ್ದಾರೆ. ವೆಂಕಟೇಶ್ವರ ಹ್ಯಾಚರೀಸ್‌ನಲ್ಲಿ…
ಹಾವೇರಿ: ಮೊಬೈಲ್ ಕ್ಯಾಂಟೀನ್ ಯೋಜನೆ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕ (ಕನ್ಸಲ್ಟೆಂಟ್) ಮಲಕ್ ಸಾಬ್ ನದಾಪ್ ಎಂಬಾತ ಲೋಕಾಯುಕ್ತ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ರವಿಚಂದ್ರ ನಿಂಗಪ್ಪ ಮೈದೂರು ಎಂಬುವರು ಪ್ರವಾಸೋದ್ಯಮ ಇಲಾಖೆಯ ಮೊಬೈಲ್ ಕ್ಯಾಂಟೀನ್ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ಯೋಜನೆಯಡಿ ಸೌಲಭ್ಯ ಮಂಜೂರು ಮಾಡಿಕೊಡಲು ಅಧಿಕಾರಿ ಮಲಕ್ ಸಾಬ್ ೨೦,೦೦೦ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಲಂಚ ನೀಡಲು ಇಚ್ಛಿಸದ ರವಿಚಂದ್ರ ಅವರು…