ಚಿಕ್ಕಬಳ್ಳಾಪುರ: ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಹಾಗೂ ಶಬ್ದ ಮಾಲಿನ್ಯಕ್ಕೆ ಕಾರಣವಾಗಿದ್ದ ದ್ವಿಚಕ್ರ ವಾಹನಗಳ ದೋಷಯುಕ್ತ (ಮಾರ್ಪಡಿಸಿದ) ಸೈಲೆನ್ಸರ್‌ಗಳ ವಿರುದ್ಧ ಚಿಕ್ಕಬಳ್ಳಾಪುರ ಸಂಚಾರ ಪೊಲೀಸ್ ಠಾಣೆ ಸಿಬ್ಬಂದಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಸಂಚಾರ ನಿಯಮ ಉಲ್ಲಂಘನೆ ಕಾರ್ಯಾಚರಣೆಗಳ ವೇಳೆ ಜಪ್ತಿ ಮಾಡಲಾಗಿದ್ದ ನೂರಾರು ದೋಷಯುಕ್ತ ಸೈಲೆನ್ಸರ್‌ಗಳನ್ನು ಇಂದು ಸಾರ್ವಜನಿಕರ ಸಮ್ಮುಖದಲ್ಲಿಯೇ ರೋಡ್ ರೋಲರ್ ಹಾಯಿಸುವ ಮೂಲಕ ಸಂಪೂರ್ಣವಾಗಿ ನಾಶಪಡಿಸಲಾಯಿತು. ಶಬ್ದ ಮಾಲಿನ್ಯಕ್ಕೆ ಕಡಿವಾಣ: ಬೈಕ್‌ಗಳಲ್ಲಿ ಕಂಪನಿ ನೀಡಿದ ಸೈಲೆನ್ಸರ್‌ಗಳನ್ನು ತೆಗೆದು, ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್‌ಗಳನ್ನು…
ಬಾಗಲಕೋಟೆ: ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ, ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿ ಶೀಟರ್‌ಗಳ ಹಜಾರಿ (ಪರೇಡ್) ನಡೆಸಲಾಯಿತು. ನವನಗರ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಲಾಗಿದ್ದ ಈ ರೌಡಿ ಪರೇಡ್‌ನಲ್ಲಿ ಠಾಣಾ ವ್ಯಾಪ್ತಿಯ ಪ್ರಮುಖ ರೌಡಿ ಶೀಟರ್‌ಗಳನ್ನು ಹಾಜರುಪಡಿಸಿ, ಅವರ ಪ್ರಸ್ತುತ ಚಟುವಟಿಕೆಗಳ ಕುರಿತು ಅಧಿಕಾರಿಗಳು ಕೂಲಂಕುಷವಾಗಿ ಪರಿಶೀಲನೆ ನಡೆಸಿದರು. ಸಮಾಜದಲ್ಲಿ ಶಾಂತಿ ಪಾಲನೆ: ಸಾರ್ವಜನಿಕರಿಗೆ ತೊಂದರೆ ನೀಡದೆ, ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡಿಕೊಂಡು ಜೀವಿಸಬೇಕು. …