ಬೆಂಗಳೂರು: ಕೇವಲ ಎರಡು ತೊಲೆ ಚಿನ್ನದ ಒಡವೆಗಾಗಿ ಅಳಿಯನೇ ತನ್ನ ಅತ್ತೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಂಗಳೂರಿನ ಯಲಹಂಕದಲ್ಲಿ ಬೆಳಕಿಗೆ ಬಂದಿದೆ. ಹಣ ಹಾಗೂ ಒಡವೆಯ ಆಸೆಗೆ ಬಿದ್ದ ಅಳಿಯ, ಸ್ವಂತ ಅತ್ತೆಯ ಪ್ರಾಣವನ್ನೇ ತೆಗೆಯುವ ಮೂಲಕ ಕ್ರೌರ್ಯದ ಮಿತಿ ಮೀರಿದ್ದಾನೆ. ಆರೋಪಿಯು ವೃದ್ಧೆಯ ಮೇಲಿದ್ದ ಕೇವಲ ೨ ತೊಲೆ ಚಿನ್ನಾಭರಣವನ್ನು ದೋಚುವ ಉದ್ದೇಶದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಯಲಹಂಕ ವಲಯದ ಪೊಲೀಸರು…
ಬೆಂಗಳೂರು: ಪಾರ್ಟಿಯೊಂದರಲ್ಲಿ ಸ್ನೇಹಿತರ ನಡುವೆ ನಡೆದ ಅಸಂಬದ್ಧ ತಮಾಷೆ ಹಾಗೂ ಕ್ಷಣಿಕ ಕೋಪದ ಹಲ್ಲೆಯು ಕೊನೆಗೆ ಯುವಕನೊಬ್ಬನ ಆತ್ಮಹತ್ಯೆಗೆ ಕಾರಣವಾಗಿರುವ ಘೋರ ದುರ್ಘಟನೆ ಸಿಲಿಕಾನ್ ಸಿಟಿಯಲ್ಲಿ ಸಂಭವಿಸಿದೆ. ಮೂಲತಃ ತ್ರಿಪುರಾ ಮೂಲದ, ಬೆಂಗಳೂರಿನ ಕೋರಮಂಗಲದ ಪಬ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದ ತಪಾನ್ ನಾಥ್ (೨೮) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇತ್ತೀಚೆಗೆ ತಪಾನ್ ನಾಥ್ ತನ್ನ ಸ್ನೇಹಿತರೊಂದಿಗೆ ಪಾರ್ಟಿಯೊಂದಕ್ಕೆ ಹೋಗಿದ್ದಾಗ ಸ್ನೇಹಿತರ ನಡುವೆ ಗಲಾಟೆ ನಡೆದಿದೆ. ಈ ವೇಳೆ ತಮಾಷೆಗಾಗಿಯೋ ಅಥವಾ ಸಿಟ್ಟಿನಿಂದಲೋ ಸ್ನೇಹಿತರು ತಪಾನ್‌ನ…