ಬೆಂಗಳೂರು: ಜಗತ್ತಿಗೆ ಜ್ಞಾನದ ಜ್ಯೋತಿಯನ್ನು ಬೆಳಗಿದ ಗೌತಮ ಬುದ್ಧ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹಿರಿಯ ವಕೀಲರಾದ ಪ್ರೇಮಿಳಾ ನೇಸರ್ಗಿ ಅವರು ಕರೆ ನೀಡಿದ್ದಾರೆ. ನಗರದ ನಯನ ಸಭಾಂಗಣದಲ್ಲಿ ‘ಇದು ನಿಮ್ಮ ವಾಹಿನಿ ಕಲಾ ವೇದಿಕೆ’ ವತಿಯಿಂದ ಆಯೋಜಿಸಲಾಗಿದ್ದ ಬುದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತೋತ್ಸವ ಮತ್ತು 22ನೇ ಸಾಂಸ್ಕೃತಿಕ ಸಿಂಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು….
ಬೆಂಗಳೂರು: ರಾಜಧಾನಿ ಹಾಗೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಪುಂಡ-ಪೋಕರಿಗಳ ಹಾಗೂ ಕಿಡಿಗೇಡಿಗಳ ಗೂಂಡಾ ಪ್ರವೃತ್ತಿ ಮಿತಿ ಮೀರಿ ಹೋಗಿದೆ. ರಸ್ತೆಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವುದು, ಅಪಾಯಕಾರಿ ವೀಲಿಂಗ್ ಮಾಡುವುದು ಹಾಗೂ ಸಣ್ಣಪುಟ್ಟ ವಿಷಯಗಳಿಗೆ ಮಾರಕಾಸ್ತ್ರಗಳನ್ನು ಝಳಪಿಸಿ ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವುದು ನಿರಂತರವಾಗಿ ನಡೆಯುತ್ತಲೇ ಇದೆ. ಈ ಕುರಿತು ನಗರದ ಸಾಮಾನ್ಯ ನಾಗರಿಕರು ತೀವ್ರ ಆಕ್ರೋಶ ಹಾಗೂ ಆತಂಕ ವ್ಯಕ್ತಪಡಿಸುತ್ತಿದ್ದು, ಖಾಕಿ ಪಡೆ ಇಂತಹ ಪುಂಡರ ವಿರುದ್ಧ ಸಿಂಗಂ ಶೈಲಿಯಲ್ಲಿ ತಿರುಗಿಬೀಳಬೇಕೆಂದು ಒತ್ತಾಯಿಸಿದ್ದಾರೆ. …