ಭಟ್ಕಳ: ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಮಾಜದ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಹಾಗೂ ನಿರಂತರವಾಗಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಇಬ್ಬರು ರೌಡಿಶೀಟರ್‌ಗಳನ್ನು ಉತ್ತರ ಕನ್ನಡ ಜಿಲ್ಲೆಯಿಂದ ಆರು ತಿಂಗಳ ಅವಧಿಗೆ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭರ್ಜರಿ ಆದೇಶ ಹೊರಡಿಸಿದ್ದಾರೆ. ಭಟ್ಕಳ ತಾಲೂಕಿನ ಮುರ್ಡೇಶ್ವರದ ಮಾವಳ್ಳಿ-2 ನಿವಾಸಿ ಶೇಖರ ಮಂಜುನಾಥ ನಾಯ್ಕ (25) ಹಾಗೂ ಕೋಣಾರದ ಕೆರೆಹಿತ್ತಲ ನಿವಾಸಿ ಮಿಥುನ ಕುಪ್ಪಯ್ಯ ನಾಯ್ಕ (27) ಗಡಿಪಾರಾದ ಕುಖ್ಯಾತ ಆರೋಪಿಗಳಾಗಿದ್ದಾರೆ. ಗಡಿಪಾರು ಆದೇಶಕ್ಕೆ ಬಲವಾದ…
ಬೀಜಿಂಗ್: ವಿಶ್ವದ ದೊಡ್ಡಣ್ಣ ಚೀನಾದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಚೀನಾದ ಅತ್ಯಂತ ಪ್ರಮುಖ ಕಲ್ಲಿದ್ದಲು ಉತ್ಪಾದನಾ ಪ್ರದೇಶವಾದ ಶಾಂಕ್ಸಿ ಪ್ರಾಂತ್ಯದ ‘ಲಿಯುಶೆನ್ಯು’ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಅನಿಲ ಸ್ಫೋಟದಲ್ಲಿ ಕನಿಷ್ಠ 82 ಕಾರ್ಮಿಕರು ಸಜೀವ ದಹನವಾಗಿದ್ದಾರೆ ಎಂದು ಚೀನಾದ ಅಧಿಕೃತ ರಾಜ್ಯ ಮಾಧ್ಯಮಗಳು ವರದಿ ಮಾಡಿವೆ. ಗಣಿಯ ಆಳದಲ್ಲಿ ಸಿಲುಕಿರುವ ಇನ್ನುಳಿದ ಕಾರ್ಮಿಕರ ರಕ್ಷಣೆಗಾಗಿ ಸದ್ಯ ಯುದ್ಧೋಪಾದಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕಲ್ಲಿದ್ದಲು ಗಣಿಯ ತಳಭಾಗದಲ್ಲಿ ಕಾರ್ಮಿಕರು ಎಂದಿನಂತೆ ಕೆಲಸ ಮಾಡುತ್ತಿದ್ದಾಗ ಈ ಆಕಸ್ಮಿಕ…