Police Roundup

Day: May 8, 2026

ಐಪಿಎಸ್ ಅಧಿಕಾರಿ ರಾಮಚಂದ್ರರಾವ್ ಅಮಾನತು ಆದೇಶ ರದ್ದು: ಹೊಸ ಹುದ್ದೆ ನೀಡಿ ಸರ್ಕಾರದ ಆದೇಶ

ಬೆಂಗಳೂರು: ಮಹಿಳೆಯರೊಂದಿಗಿನ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡಿದ್ದ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರರಾವ್ ಅವರ ಅಮಾನತು ಆದೇಶವನ್ನು ರಾಜ್ಯ ಸರ್ಕಾರ ಅಧಿಕೃತವಾಗಿ ರದ್ದುಗೊಳಿಸಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಹೊಸ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.   ಆಲ್ ಇಂಡಿಯಾ ಸರ್ವಿಸ್ (AIS) ನಿಯಮಗಳಡಿ ರಾಮಚಂದ್ರರಾವ್ ಅವರ ಅಮಾನತನ್ನು ಹಿಂಪಡೆದಿರುವ ಸರ್ಕಾರ, ಅವರಿಗಾಗಿಯೇ ‘ಡೈರೆಕ್ಟರ್ ಜನರಲ್ ಆಫ್ ಪೊಲೀಸ್ (ಪೊಲೀಸ್ ಮ್ಯಾನುಯೆಲ್)’ ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿ ಅಲ್ಲಿಗೆ ನೇಮಕ…

Read More

ಉಳ್ಳಾಲ: ಕಳಪೆ ಚರಂಡಿ ಕಾಮಗಾರಿಗೆ ಲಾರಿ ಪಲ್ಟಿ ; ಸಾರ್ವಜನಿಕರ ಆಕ್ರೋಶ, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಆಗ್ರಹ

ಮಂಗಳೂರು (ಉಳ್ಳಾಲ): ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ನಡೆದ ಕಳಪೆ ಚರಂಡಿ ಕಾಮಗಾರಿಯ ಬಣ್ಣ ಈಗ ಬಯಲಾಗಿದ್ದು, ನೂತನವಾಗಿ ನಿರ್ಮಿಸಲಾದ ಚರಂಡಿ ಕುಸಿದು ಲಾರಿಯೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಈ ಅವಘಡದಿಂದಾಗಿ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.   ಉಳ್ಳಾಲದ ಅಬ್ಬಕ್ಕ ವಾರ್ಡ್‌ನಲ್ಲಿ ಇತ್ತೀಚೆಗಷ್ಟೇ ಹೊಸ ಚರಂಡಿ ನಿರ್ಮಾಣ ಮಾಡಲಾಗಿತ್ತು. ಇಂದು ಲಾರಿಯೊಂದು ಈ ಚರಂಡಿಯ ಮೇಲೆ ಚಲಿಸುತ್ತಿದ್ದಾಗ, ಚರಂಡಿಯ ಸ್ಲ್ಯಾಬ್‌ಗಳು ದಿಢೀರನೆ ಕುಸಿದಿವೆ. ಪರಿಣಾಮವಾಗಿ ಲಾರಿಯು ಚರಂಡಿಯೊಳಗೆ ಸಿಲುಕಿ ಪಲ್ಟಿಯಾಗುವ ಸ್ಥಿತಿಗೆ ತಲುಪಿದೆ….

Read More

Solverwp- WordPress Theme and Plugin