ಬೆಂಗಳೂರು: ನಿಯಂತ್ರಣ ತಪ್ಪಿದ ಬಿಎಂಟಿಸಿ ಬಸ್ಸೊಂದು ದೇವಸ್ಥಾನದ ಆವರಣಕ್ಕೆ ನುಗ್ಗಿದ ಘಟನೆ ಇಂದು ಮಧ್ಯಾಹ್ನ ಹೇರೋಹಳ್ಳಿ ಕ್ರಾಸ್ ಸಮೀಪ ನಡೆದಿದೆ. ಬಸ್ ಗುದ್ದಿದ ರಭಸಕ್ಕೆ ದೇವಸ್ಥಾನದ ತಡೆಗೋಡೆ ಹಾಗೂ ಗ್ರಿಲ್ ಸಂಪೂರ್ಣ ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನೆಲಮಂಗಲದ 8ನೇ ಮೈಲಿಯಿಂದ ಹೇರೋಹಳ್ಳಿ ಕ್ರಾಸ್‌ಗೆ ತೆರಳುತ್ತಿದ್ದ ಬಿಎಂಟಿಸಿ ಘಟಕ-9ಕ್ಕೆ ಸೇರಿದ ಬಸ್ (KA 53 F 0137) ಇಂದು ಮಧ್ಯಾಹ್ನ ಸುಮಾರು 1 ಗಂಟೆ ವೇಳೆಗೆ ಬೃಂದಾವನ ಬಸ್ ಸ್ಟಾಪ್ ಸಮೀಪ ಬರುತ್ತಿತ್ತು. ಈ…
ಮಾಲೂರು: ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೆ.ಜಿ ಹಳ್ಳಿ ಗ್ರಾಮದ ಬಳಿ ಯುವಕನೊಬ್ಬನನ್ನು ಕಲ್ಲಿನಿಂದ ಜಜ್ಜಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಈ ಘಟನೆಯಿಂದ ಇಡೀ ತಾಲೂಕು ಬೆಚ್ಚಿಬಿದ್ದಿದ್ದು, ಕೊಲೆಗಡುಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಲೂರು ತಾಲೂಕಿನ ಜಂಗಾನಹಳ್ಳಿ ಗ್ರಾಮದ ನಿವಾಸಿ ಪುರುಷೋತ್ತಮ್ (26) ಕೊಲೆಯಾದ ದುರ್ದೈವಿ. ಟೇಕಲ್ ರೈಲ್ವೆ ನಿಲ್ದಾಣದ ಪಕ್ಕದಲ್ಲಿರುವ ಸಂತೇ ಮೈದಾನದ ಬಳಿ ಈ ಕೃತ್ಯ ನಡೆದಿದೆ. ಇಬ್ಬರು ಯುವಕರು ಪುರುಷೋತ್ತಮ್‌ನನ್ನು ಹಿಂಬಾಲಿಸಿ, ಅಡ್ಡಗಟ್ಟಿ ತಲೆಯ ಮೇಲೆ ಕಲ್ಲಿನಿಂದ…