ಬೆಂಗಳೂರು: ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ “ಇದು ನಮ್ಮ ವ್ಯಾಪ್ತಿಗೆ ಬರಲ್ಲ”, “ಮುಂದೆ ನೋಡೋಣ” ಅಥವಾ “ವಿಚಾರಣೆ ಮಾಡಿಯೇ ಕೇಸ್ ದಾಖಲಿಸುತ್ತೇವೆ” ಎಂದು ಕುಂಟು ನೆಪ ಹೇಳುವ ಪೊಲೀಸರಿಗೆ ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿದೆ. ಐತಿಹಾಸಿಕ ‘ಲಲಿತಾ ಕುಮಾರಿ’ ಪ್ರಕರಣದ ತೀರ್ಪಿನ ಅನ್ವಯ, ಗಂಭೀರ ಸ್ವರೂಪದ ಅಪರಾಧಗಳ ಮಾಹಿತಿ ಲಭ್ಯವಾದ ಕೂಡಲೇ ಪ್ರಥಮ ಮಾಹಿತಿ ವರದಿ (FIR) ದಾಖಲಿಸುವುದು ಇನ್ಮುಂದೆ ಕಡ್ಡಾಯ. ತನ್ನ ಅಪ್ರಾಪ್ತ ಮಗಳು ಕಿಡ್ನಾಪ್ ಆಗಿದ್ದಾಳೆಂದು ತಂದೆಯೊಬ್ಬರು ದೂರು ನೀಡಿದರೂ ಪೊಲೀಸರು…
ದೊಡ್ಡಬಳ್ಳಾಪುರ: ಬೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಇಂದಿನಿಂದ (ಮೇ 2) ಮೇ 8ರವರೆಗೆ ದೊಡ್ಡಬಳ್ಳಾಪುರ ನಗರ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ನಗರ ಉಪವಿಭಾಗದ ವಿವಿಧ 11 ಕೆವಿ ಫೀಡರ್‌ಗಳಲ್ಲಿ ದುರಸ್ತಿ ಕಾರ್ಯ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ವಿನಯ್‌ಕುಮಾರ್ ಅವರು ಮಾಹಿತಿ ನೀಡಿದ್ದಾರೆ. ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಮತ್ತು…