ದೊಡ್ಡಬಳ್ಳಾಪುರ: ಬೆಸ್ಕಾಂ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ, ಇಂದಿನಿಂದ (ಮೇ 2) ಮೇ 8ರವರೆಗೆ ದೊಡ್ಡಬಳ್ಳಾಪುರ ನಗರ ಮತ್ತು ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ಬೆಸ್ಕಾಂ ನಗರ ಉಪವಿಭಾಗದ ವಿವಿಧ 11 ಕೆವಿ ಫೀಡರ್‌ಗಳಲ್ಲಿ ದುರಸ್ತಿ ಕಾರ್ಯ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ವಿನಯ್‌ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಮತ್ತು ದಿನಾಂಕ:
ಮೇ 2: ವರದನಹಳ್ಳಿ, ಟಾಫೆ, ಎಳ್ಳುಪುರ ಮತ್ತು ಸುತ್ತಮುತ್ತ.
ಮೇ 3: ರೈಲ್ವೆ ಸ್ಟೇಷನ್, ಜೀನ್ಸ್ ನಿಟ್ ಹಾಗೂ ನಗರದ ಕೆಲವು ಪ್ರದೇಶಗಳು.
ಮೇ 4: ಟೆಲಿಫೋನ್ ಎಕ್ಸ್‌ಜೇಂಜ್, ಬಿರ್ಲಾ ಸೂಪರ್ ಹಾಗೂ ಕರೇನಹಳ್ಳಿ.
ಮೇ 5: ನಂದಿ ಮೊರಿ ಮತ್ತು ಬೀಡಿಕರೆ ವ್ಯಾಪ್ತಿ.
ಮೇ 6: ವಾಸವಿ, ಅಪಾರೆಲ್ ಪಾರ್ಕ್ ಮತ್ತು ಏಕಾಶಿಪುರ.
ಮೇ 7: ರೈಲ್ವೆ ಸ್ಟೇಷನ್ ಸುತ್ತಮುತ್ತಲ ಪ್ರದೇಶಗಳು.
ಮೇ 8: ಜಾಲಿಗೆ ಹಾಗೂ ಏಕಾಶಿಪುರ ಸುತ್ತಮುತ್ತಲ ಭಾಗಗಳು.
ಗ್ರಾಹಕರು ಬೆಸ್ಕಾಂ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಈ ಮೂಲಕ ಕೋರಲಾಗಿದೆ.