ಬೆಂಗಳೂರು: ವಿಧಾನ ಪರಿಷತ್‌ನ ಉಪಸಭಾಪತಿ ಹುದ್ದೆಗೆ ಹಿರಿಯ ನಟಿ ಹಾಗೂ ಮೇಲ್ಮನೆ ಸದಸ್ಯೆ ಉಮಾಶ್ರೀ ಅವರ ಹೆಸರನ್ನು ಅಧಿಕೃತವಾಗಿ ಸೂಚಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ವಿಧಾನ ಪರಿಷತ್‌ನ ಸಭಾನಾಯಕ ಯತೀಂದ್ರ ಸಿದ್ದರಾಮಯ್ಯ ಅವರು ಮೇಲ್ಮನೆ ಕಾರ್ಯದರ್ಶಿಯವರಿಗೆ ಸೋಮವಾರ ಈ ಕುರಿತಾದ ಪ್ರಸ್ತಾವನೆಯನ್ನು ಹಸ್ತಾಂತರಿಸಿದರು. ಈ ಪ್ರಮುಖ ಸಂದರ್ಭದಲ್ಲಿ ನಾಯಕರಾದ ಗೋವಿಂದರಾಜ್, ಬಸನಗೌಡ ಬಾದರ್ಲಿ, ಚನ್ನರಾಜ್ ಹಟ್ಟಿಹೊಳಿ ಸೇರಿದಂತೆ ಹಲವು ಪ್ರಮುಖ ಜನಪ್ರತಿನಿಧಿಗಳು ಹಾಜರಿದ್ದರು. ಉಮಾಶ್ರೀ ಅವರ ಸುದೀರ್ಘ ಸಾರ್ವಜನಿಕ…
ಅಮೆರಿಕದ ಪೌರತ್ವ ಪಡೆಯುವ ದುರುದ್ದೇಶದಿಂದ ವಿದೇಶಗಳಿಂದ ತೆರಳಿ ಮಗುವಿಗೆ ಜನ್ಮ ನೀಡುವ ‘ಬರ್ತ್ ಟೂರಿಸ್ಮ್’ (Birth Tourism) ವಿರುದ್ಧ ಅಮೆರಿಕ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ 9ನೇ ತಿಂಗಳ ಗರ್ಭಿಣಿಯರಾಗಿ ಅಮೆರಿಕಕ್ಕೆ ಪ್ರವೇಶಿಸಲು ಯತ್ನಿಸಿದ ಅಥವಾ ಈಗಾಗಲೇ ಪ್ರವೇಶ ಪಡೆದಿದ್ದ ವಿದೇಶಿ ಪ್ರಜೆಗಳ 600ಕ್ಕೂ ಅಧಿಕ ವೀಸಾಗಳನ್ನು ಅಮೆರಿಕ ವಿದೇಶಾಂಗ ಇಲಾಖೆ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಿದೆ. ಏನಿದು ‘ಬರ್ತ್ ಟೂರಿಸ್ಮ್’? ಅಮೆರಿಕದ ಸಂವಿಧಾನದ ಪ್ರಕಾರ, ಅಲ್ಲಿನ ನೆಲದಲ್ಲಿ ಜನಿಸುವ…