ಖಮ್ಮಂ: ಕಟ್ಟಡ ನಿರ್ಮಾಣದ ಅನುಮತಿ ಪತ್ರ (Building Permission) ನೀಡಲು ಸಾರ್ವಜನಿಕರಿಂದ ₹25,000 ಲಂಚ ಪಡೆಯುತ್ತಿದ್ದ ಖಮ್ಮಂ ಜಿಲ್ಲೆಯ ಪಂಚಾಯತ್ ಕಾರ್ಯದರ್ಶಿಯೊಬ್ಬರು ಭ್ರಷ್ಟಾಚಾರ ನಿಗ್ರಹ ದಳದ (ACB) ಬಲೆಗೆ ಬಿದ್ದಿದ್ದಾರೆ. ಬಾಧಿತ ದೂರುದಾರರು ಕಟ್ಟಡ ಅನುಮತಿಗಾಗಿ ಪಂಚಾಯತ್ ಕಚೇರಿಗೆ ಅಲೆದಾಡುತ್ತಿದ್ದರು. ಆದರೆ, ಪಂಚಾಯತ್ ಕಾರ್ಯದರ್ಶಿಯು ₹25,000 ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ತಕ್ಷಣವೇ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಎಸಿಬಿ ಅಧಿಕಾರಿಗಳು ಶನಿವಾರದಂದು ವ್ಯವಸ್ಥಿತವಾಗಿ ಕಾರ್ಯಾಚರಣೆ…
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಮ್ಮೆ ಸೌತ್ ಅಂಡರ್ ವರ್ಲ್ಡ್ ರಕ್ತಸಿಕ್ತವಾಗಿದೆ. ಹಳೆ ಹಗೆತನ ಹಾಗೂ ರಿವೇಂಜ್ ಕಿಲ್ಲಿಂಗ್‌ಗೆ ಬೆಂಗಳೂರು ದಕ್ಷಿಣ ಭಾಗದ ಕುಖ್ಯಾತ ರೌಡಿ ಶೀಟರ್ ಹಲ್ಮುರ್ಕ ರಾಜಾ ಬಲಿಯಾಗಿದ್ದಾನೆ. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ರಾಜ್ಯದಲ್ಲಿ ರೌಡಿಗಳ ಅಟ್ಟಹಾಸಕ್ಕೆ ಬ್ರೇಕ್ ಹಾಕಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದರೂ, ಭೂಗತ ಜಗತ್ತಿನ ಈ ಸರಣಿ ಕೊಲೆಗಳು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿವೆ. ಕೊಲೆಯಾದ ರೌಡಿ ರಾಜಾ ಅಲಿಯಾಸ್ ಹಲ್ಮುರ್ಕ ರಾಜಾ, ಮಾಜಿ ರೌಡಿ ಜೇಡ್ರಳ್ಳಿ ಕೃಷ್ಣಪ್ಪನ…