ನ್ಯಾಯದಾನ ಮಾಡುವ ಪವಿತ್ರ ಸ್ಥಳ ಎಂದೇ ಪರಿಗಣಿಸಲ್ಪಡುವ ಬೆಂಗಳೂರು ಹೊರವಲಯದ ಆನೇಕಲ್ ನ್ಯಾಯಾಲಯ ಸಂಕೀರ್ಣದಿಂದ ಬರೊಬ್ಬರಿ 28 ಪ್ರಮುಖ ಪ್ರಕರಣಗಳ ಕಡತಗಳು (Case Files) ನಿಗೂಢವಾಗಿ ನಾಪತ್ತೆಯಾಗಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ದೂರಿಗೆ ಸಂಬಂಧಿಸಿದಂತೆ ಈಗ ಆನೇಕಲ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಕಳ್ಳತನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಾಂಗ ಅಧಿಕಾರಿ ಎಂ. ಮಾರುಸ್ವಾಮಿ ಅವರು ಸೋಮವಾರ ಆನೇಕಲ್ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಿದ್ದಾರೆ. ನ್ಯಾಯಾಲಯದ…
ಅಪ್ರಾಪ್ತ ವಯಸ್ಕರು (Minor) ರಸ್ತೆಗಿಳಿದು ವಾಹನ ಚಾಲನೆ ಮಾಡುವುದು ಕಾನೂನುಬಾಹಿರ ಮತ್ತು ಕಠಿಣ ಶಿಕ್ಷಾರ್ಹ ಅಪರಾಧವಾಗಿದ್ದು, ಪೋಷಕರು ಹಾಗೂ ಸಾರ್ವಜನಿಕರು ಈ ನಿಟ್ಟಿನಲ್ಲಿ ತೀವ್ರ ಎಚ್ಚರಿಕೆ ವಹಿಸುವಂತೆ ಆನೇಕಲ್ ಪೊಲೀಸ್ ಠಾಣೆಯು ಕಡಕ್ ಸೂಚನೆ ನೀಡಿದೆ. ಮಕ್ಕಳ ಸುರಕ್ಷತೆ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಆನೇಕಲ್ ಪೊಲೀಸರು ವಿಶೇಷ ಜಾಗೃತಿ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಮೋಟಾರ್ ವಾಹನ ಕಾಯ್ದೆ, 1988ರ (2019ರ ತಿದ್ದುಪಡಿ ಅನ್ವಯ) ಪ್ರಕಾರ, ಕಾನೂನುಬದ್ಧ ವಯಸ್ಸು (Driving Age) ತಲುಪುವ ಮುನ್ನವೇ ಅಪ್ರಾಪ್ತರು ವಾಹನ ಚಾಲನೆ…