ತುಮಕೂರು (ಆಗಸ್ಟ್ 02): ದೇಶದ ಸರ್ವಾಂಗೀಣ ಪ್ರಗತಿಗೆ ಕ್ರೀಡೆಗಳು ಪೂರಕವಾಗಿರಬೇಕು ಎಂದು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ರಾಜ್ಯ ರ‍್ಯಾಂಕಿಂಗ್ ಬ್ಯಾಡ್ಮಿಂಟನ್ ಅಂಡರ್-11 ಮತ್ತು ಅಂಡರ್-13 ವಿಭಾಗಗಳ ಬ್ಯಾಡ್ಮಿಂಟನ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು. ಜಾಗತಿಕ ಮಟ್ಟದ ಸಿದ್ಧತೆ: “ವಿಕಸಿತ ಭಾರತ 2047ರ ಅಭಿಯಾನದ ವೇಳೆಗೆ ಭಾರತದ ಕ್ರೀಡಾ ಕ್ಷೇತ್ರವು ಜಾಗತಿಕ ಮಟ್ಟದಲ್ಲಿ ಉತ್ತುಂಗ ಸ್ಥಾನ…
ರಾಣೇಬೆನ್ನೂರು : ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿ ಹೊರಬರುತ್ತಿದ್ದ ನಿವೃತ್ತ ಶಿಕ್ಷಕರೊಬ್ಬರ ಎಟಿಎಂ ಕಾರ್ಡ್ ಅನ್ನು ಕೈಚಳಕದಿಂದ ಬದಲಾಯಿಸಿ, ಅವರ ಖಾತೆಯಿಂದ ₹44,754 ಹಣವನ್ನು ವಂಚಿಸಿರುವ ಘಟನೆ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿರುವ ‘ಇಂಡಿಯಾ-1’ ಎಟಿಎಂ ಕೇಂದ್ರದಲ್ಲಿ ಜರುಗಿದೆ. ಈ ಕುರಿತು ಸಂತ್ರಸ್ತ ನಿವೃತ್ತ ಶಿಕ್ಷಕರು ನೀಡಿದ ದೂರಿನನ್ವಯ ರಾಣೇಬೆನ್ನೂರು ನಗರ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸರಿತ್ತಿ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಶಿಕ್ಷಕ ಪುಟ್ಟನಗೌಡ ನಾಗನಗೌಡ ಪಾಟೀಲ (69) ಎಂಬುವರು…