Skip to main content

Police Roundup

ಅಂಬೇಡ್ಕರ್ ಧೈರ್ಯ ನೀಡಿದ್ದಾರೆ, ಸಾವರ್ಕರ್ ರಕ್ತವಲ್ಲ: ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

Share News

ಬೆಂಗಳೂರು: “ನಾನು ಮನೆಯಿಂದ ಆಚೆ ಬರುವುದಕ್ಕೆ ಭಾರತದ ಸಂವಿಧಾನದ ರಕ್ಷಣೆ ಇದೆ. ಮುಕ್ತವಾಗಿ ಮಾತನಾಡುವುದಕ್ಕೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ನೈತಿಕ ಧೈರ್ಯವಿದೆ,” ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

 

​ವಿಪಕ್ಷ ನಾಯಕ R. ಅಶೋಕ್ ಅವರ “RSS ಎದುರು ಹಾಕಿಕೊಂಡರೆ ನೀವು ಮನೆಯಿಂದ ಆಚೆ ಬರಲು ಆಗುವುದಿಲ್ಲ” ಎಂಬ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಚಿವರು, ಈ ರೀತಿಯ ಬೆದರಿಕೆ ಮಾತುಗಳ ಹಿಂದಿನ ಅರ್ಥವೇನು ಎಂದು ಪ್ರಶ್ನಿಸಿದ್ದಾರೆ.

 

​ಖರ್ಗೆ ಅವರ ಹೇಳಿಕೆಯ ಪ್ರಮುಖ ಅಂಶಗಳು:

​ಹೆಗಲು ಮುಟ್ಟಿ ನೋಡಿಕೊಳ್ಳುತ್ತಿರುವ ಬಿಜೆಪಿ: ಸಾರ್ವಜನಿಕ ಸ್ಥಳಗಳ ಬಳಕೆಗೆ ಕಾನೂನು ಮತ್ತು ನಿಯಮಗಳನ್ನು ಪಾಲನೆ ಮಾಡಬೇಕು ಎಂದರೆ, ಬಿಜೆಪಿಯವರು ಇದು RSS ಗೆ ಹೇಳಿರುವುದು ಎಂದು ಭಾವಿಸಿ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ಕುಂಬಳಕಾಯಿ ಕದ್ದವರಿಗೆ ಮಾತ್ರ ಈ ರೀತಿಯ ಆತಂಕವಿರುತ್ತದೆ.

 

​ಆರ್.ಎಸ್.ಎಸ್ ಮಾಫಿಯಾನಾ?: RSS ಎದುರು ಹಾಕಿಕೊಂಡರೆ ಮನೆಯಿಂದ ಆಚೆ ಬರಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಲು RSS ಭಯೋತ್ಪಾದಕ ಸಂಘಟನೆಯೇ ಅಥವಾ ಪ್ರಶ್ನಿಸಿದವರನ್ನು ಮುಗಿಸುವ ಅಂಡರ್ ವರ್ಲ್ಡ್ ಮಾಫಿಯಾವೇ?

 

​ಅಂಬೇಡ್ಕರ್ ರಕ್ತ: RSSನ ಗೊಡ್ಡು ಬೆದರಿಕೆಗಳಿಗೆ ಹೆದರಲು ನಮ್ಮಲ್ಲಿ ಹರಿಯುತ್ತಿರುವುದು ಸಾವರ್ಕರ್ ರಕ್ತವಲ್ಲ, ನಮ್ಮದು ಅಂಬೇಡ್ಕರ್ ರಕ್ತ. ಅಂಬೇಡ್ಕರ್ ನಮಗೆ ಧೈರ್ಯವನ್ನು ನೀಡಿದ್ದಾರೆಯೇ ಹೊರತು ಭಯವನ್ನಲ್ಲ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin