Skip to main content

Police Roundup

ಕಾನ್ಪುರ: ತರಬೇತಿ ವಿಮಾನ ಪತನ – ಕರ್ನಾಟಕ ಮೂಲದ ಪೈಲಟ್ ಸೇರಿ ಇಬ್ಬರು ದಾರುಣ ಸಾವು

Share News

ಉತ್ತರ ಪ್ರದೇಶ: ಗಂಗಾ ಬ್ಯಾರೇಜ್ ಸಮೀಪದ ಕೃಷಿ ಜಮೀನಿನಲ್ಲಿ ತರಬೇತಿ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

 

​ಕಾನ್ಪುರದ ನತ್ತಪುರವಾ ಗ್ರಾಮದ ಬಳಿ ಗುರುವಾರ ಈ ದುರಂತ ಸಂಭವಿಸಿದೆ. ಗರ್ಗ್ ಏವಿಯೇಷನ್ ಸಂಸ್ಥೆಗೆ ಸೇರಿದ ಟ್ವಿನ್‌ ಎಂಜಿನ್, ನಾಲ್ಕು ಆಸನಗಳ ‘ಟೆಕ್ನಮ್’ ವಿಮಾನವು ಬೆಳಿಗ್ಗೆ 11.30ರ ಸುಮಾರಿಗೆ ಟೇಕ್‌ಆಫ್ ಆದ 20 ನಿಮಿಷಗಳಲ್ಲೇ ಅಪಘಾತಕ್ಕೀಡಾಗಿದೆ.

 

​ಮೃತಪಟ್ಟ ಪೈಲಟ್‌ಗಳು:

​ಅಭಿಷೇಕ್ ಪೂಜಾರಿ: ಕರ್ನಾಟಕ ಮೂಲದ ತರಬೇತಿ ಪೈಲಟ್.

​ಸಚಿನ್ ಭಾಟಿಯಾ: ಗುಜರಾತ್ ಮೂಲದ ತರಬೇತುದಾರ ಪೈಲಟ್ (3,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು).

 

​ಸ್ಥಳಕ್ಕೆ ಪೊಲೀಸರ ಭೇಟಿ, AAIB ತನಿಖೆಗೆ ಆದೇಶ:

ವಿಮಾನ ಪತನಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಪ್ರದೇಶವನ್ನು ಸುತ್ತುವರಿದು ವಿಮಾನದ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

 

​ಸದರಿ ದುರಂತದ ಕುರಿತು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB) ವಿಸ್ತೃತ ತನಿಖೆ ನಡೆಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin