ಮನೆಯಲ್ಲಿ ಜೂಜಾಟ ಆಡಿಸುತ್ತಿದ್ದ ಕಾಂಗ್ರೆಸ್ ಮುಖಂಡ – ಪೊಲೀಸ್ ರ ದಾಳಿ ವಿಜಯಪುರ – ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡನ ಮನೆಯಲ್ಲೇ ಇಸ್ಪೀಟ್ ಆಡುತ್ತಿದ್ದಾಗ ಪೊಲೀಸ್ ದಾಳಿ.
ಸೌದಾಗಾರ ಓಣಿಯಲ್ಲಿರುವ ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮಹಮ್ಮದ ಸಾದಿಕ ಫರೀದಸಾಬ ಸುಂಬಡ ಅವರ ಮನೆಯಲ್ಲಿ ಅನಧಿಕೃತವಾಗಿ ನಡೆಯುತ್ತಿದ್ದ ಇಸ್ಪೀಟ್ ಜೂಜಾಟದ ಅಡ್ಡೆಯ ಮೇಲೆ ಆಲಮೇಲ ಪೊಲೀಸ್ ಠಾಣೆಯ ಪಿಎಸ್ಐ ಪೊಲೀಸ್ ಹಠಾತ್ ದಾಳಿ ನಡೆಸಿದ್ದಾರೆ. ದಾಳಿಯ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸೇರಿದಂತೆ ಒಟ್ಟು 15 ಜನರ ವಿರುದ್ಧ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಲಮೇಲ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಆಲಮೇಲ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ) ಅರವಿಂದ ಬಿ. ಅಂಗಡಿ ಅವರ ನೇತೃತ್ವದ ತಂಡವು ಈ ಕಾರ್ಯಾಚರಣೆ ಕೈಗೊಂಡಿದೆ.
ರವಿವಾರ ಸಾಯಂಕಾಲ ಆಲಮೇಲ ಪೊಲೀಸ್ ಠಾಣೆಯ ಪಿಎಸ್ಐ ಅರವಿಂದ ಬಿ. ಅಂಗಡಿ ಅವರು ತಮ್ಮ ಸಿಬ್ಬಂದಿಗಳಾದ ಎಸ್.ಜಿ. ಪಾಟೀಲ ಹಾಗೂ ಎಚ್.ಟಿ. ಘೋಡೆಕರ ಅವರೊಂದಿಗೆ ಸರ್ಕಾರಿ ವಾಹನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದರು.
ರವಿವಾರ ಸಾಯಂಕಾಲ ಆಲಮೇಲ ಪೊಲೀಸ್ ಠಾಣೆಯ ಪಿಎಸ್ಐ ಅರವಿಂದ ಬಿ. ಅಂಗಡಿ ಅವರು ತಮ್ಮ ಸಿಬ್ಬಂದಿಗಳಾದ ಎಸ್.ಜಿ. ಪಾಟೀಲ ಹಾಗೂ ಎಚ್.ಟಿ. ಘೋಡೆಕರ ಅವರೊಂದಿಗೆ ಸರ್ಕಾರಿ ವಾಹನದಲ್ಲಿ ಠಾಣಾ ವ್ಯಾಪ್ತಿಯಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದರು. ಪಟ್ಟಣದ ಸೌದಾಗಾರ ಓಣಿಯಲ್ಲಿರುವ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಮ್ಮದ ಸಾದಿಕ ಸುಂಬಡ ಅವರ ಮನೆಯಲ್ಲಿ ಕೆಲವು ವ್ಯಕ್ತಿಗಳು ಒಟ್ಟಾಗಿ ಸೇರಿ, ಹಣವನ್ನು ಪಣಕ್ಕಿಟ್ಟು ‘ಅಂದರ್-ಬಾಹರ್’ ಎಂಬ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.
ತಕ್ಷಣವೇ ಪಿಎಸ್ಐ ಅವರು ಈ ಕುರಿತು ತಮ್ಮ ಉನ್ನತಾಧಿಕಾರಿಗಳ ಗಮನಕ್ಕೆ ತಂದು, ಅವರ ಮಾರ್ಗದರ್ಶನ ಹಾಗೂ ಅನುಮತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿದ್ದಾರೆ.
ನಗದು, ಬೈಕ್ ವಶ: ದಾಳಿಯ ವೇಳೆ ಜೂಜಾಟದ ಅಡ್ಡೆಯಿಂದ ಪೊಲೀಸರು 42,750 ರೂಪಾಯಿ ನಗದು ಹಣ ಹಾಗೂ ಜೂಜುಕೋರರು ಬಳಸಿದ್ದ ಮೂರು ಬೈಕ್ಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯ ವೇಳೆ ಜೂಜಾಟ ನಡೆಸುತ್ತಿದ್ದ ಹಾಗೂ ಅದಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಒಟ್ಟು 15 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಮುಸ್ತಾಕ ಸುಂಬಡ, ನಬೀರಸೂಲ ಮುಲ್ಲಾ, ಶ್ರೀಶೈಲ ನಾಯೋಡಿ, ಶ್ರೀಶೈಲ ಜೇರಗಿ, ಅಬ್ಬಾಸಲಿ ಕಳ್ಳೂರ, ಜಟ್ಟೆಪ್ಪ ಹರಿಜನ, ಸುರೇಶ ಕೊಕ್ಕೂರ, ಅಬ್ದುಲ್ ರೆಹಮಾನ ಮುಂದೇವಾಲ, ಶಿವಪ್ಪ ನಾಯೋಡಿ, ಸಿದ್ದಿಕ ಸುಂಬಡ, ಪ್ರಾಣೇಶ ಮ್ಯಾಕೇರಿ, ಅಬ್ದುಲರಜಾಕ ಬಾಬಿಮನಿ, ಮಹಮ್ಮದ ಶಫೀಕ ಸುಂಬಡ, ಮೋಹಿನ ಸೌದಾಗಾರ ಹಾಗೂ ಜೂಜಾಟಕ್ಕೆ ಮನೆ ಒದಗಿಸಿಕೊಟ್ಟ ಆಲಮೇಲ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಮ್ಮದ ಸಾದಿಕ ಫರೀದಸಾಬ ಸುಂಬಡ ಎಂದು ಗುರುತಿಸಲಾಗಿದೆ.
ವಿಶೇಷವೆಂದರೆ, ಬಂಧಿತ ಆರೋಪಿಗಳ ಪಟ್ಟಿಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಮಹಮ್ಮದ ಸಾದಿಕ ಸುಂಬಡ ಅವರ ಇಬ್ಬರು ಸಹೋದರರು ಕೂಡ ಶಾಮೀಲಾಗಿದ್ದಾರೆ. ಆರೋಪಿಗಳು ಆಲಮೇಲ, ಆಹೇರಿ, ಬಬಲೇಶ್ವರ ಹಾಗೂ ಕೊರಹಳ್ಳಿ ಗ್ರಾಮದ ನಿವಾಸಿಗಳಾಗಿದ್ದಾರೆ.
ಈ ಕುರಿತು ಆಲಮೇಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆರ್.ಎಸ್. ಪಾಟೀಲ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112(2) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ (KP Act) ಕಲಂ 79, 80 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲೇ ಜೂಜಾಟದ ಅಡ್ಡೆ ಪತ್ತೆಯಾಗಿರುವುದು ಮತ್ತು ಸ್ವತಃ ಅಧ್ಯಕ್ಷ ಹಾಗೂ ಆತನ ಸಹೋದರರೇ ಇದರಲ್ಲಿ ಭಾಗಿಯಾಗಿರುವುದು ಸ್ಥಳೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಆಲಮೇಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಆರ್.ಎಸ್. ಪಾಟೀಲ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 112(2) ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆಯ (KP Act) ಕಲಂ 79, 80 ರ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷನ ಮನೆಯಲ್ಲೇ ಜೂಜಾಟದ ಅಡ್ಡೆ ಪತ್ತೆಯಾಗಿರುವುದು ಮತ್ತು ಸ್ವತಃ ಅಧ್ಯಕ್ಷ ಹಾಗೂ ಆತನ ಸಹೋದರರೇ ಇದರಲ್ಲಿ ಭಾಗಿಯಾಗಿರುವುದು ಸ್ಥಳೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವರದಿ – ಗುಂಡು ಕುಲಕರ್ಣಿ ವಿಜಯಪುರ