ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಆಂತರಿಕ ಶಿಸ್ತಿನ ಮುಸುಕು ಸಂಪೂರ್ಣವಾಗಿ ಕಳಚಿ ಬಿದ್ದಿದೆ. ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಸಭೆಯಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಸಿನಿಮಾ ಶೈಲಿಯಲ್ಲಿ ಹೊಡೆದಾಡಿಕೊಂಡಿದ್ದು, ಘಟನೆಯಲ್ಲಿ ಮಧ್ಯಪ್ರವೇಶಿಸಿದ ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರ ಪುತ್ರ ಹಾಗೂ ಎಐಸಿಸಿ ಸದಸ್ಯ ಚಾಂಡಿ ಉಮ್ಮನ್ ಅವರ ಮೇಲೆಯೇ ಹಲ್ಲೆ ನಡೆಸಿ ನೆಲಕ್ಕೆ ಕೆಡವಿದ ಭೀಕರ ದುರ್ಘಟನೆ ವರದಿಯಾಗಿದೆ. ಗಲಾಟೆಗೆ ಕಾರಣವೇನು? ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷರ ಆಯ್ಕೆಗಾಗಿ ಯಲಚೇನಹಳ್ಳಿ ಮಾಜಿ ಕಾರ್ಪೊರೇಟರ್ ಓ. ಮಂಜುನಾಥ್…
ಇಂದಿನ ಆಧುನಿಕ ಯುಗದಲ್ಲಿ ಕೈಯಲ್ಲಿ ದುಬಾರಿ ಐಫೋನ್ ಇದ್ದರೆ ಸಾಕು, ಅವರನ್ನು ಸಭ್ಯರು ಅಥವಾ ಸಂಸ್ಕಾರಿಗಳು ಎಂದು ಭಾವಿಸುವ ವಾತಾವರಣವಿದೆ. ಆದರೆ ದುಬಾರಿ ಗ್ಯಾಜೆಟ್‌ಗಳು ವ್ಯಕ್ತಿಯ ಸಂಸ್ಕಾರವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಸಾರ್ವಜನಿಕ ಸಾರಿಗೆಯಲ್ಲಿ ನಡೆದ ಘಟನೆಯೊಂದೇ ಸಾಕ್ಷಿ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಅಸಭ್ಯವಾಗಿ ಪ್ರವರ್ತಿಸಿದ ಯುವಕನಿಗೆ ಕಂಡಕ್ಟರ್ ಮತ್ತು ಸಾರ್ವಜನಿಕರು ತಕ್ಕ ಪಾಠ ಕಲಿಸಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಬಸ್‌ನಲ್ಲಿ ನಡೆದ ವಿಕೃತ ಕೃತ್ಯ: ಮಾರುಕಟ್ಟೆಯಿಂದ ಮನೆಗೆ ಹಿಂತಿರುಗಲು ಖಾಸಗಿ ಬಸ್…