Skip to main content

Police Roundup

ಶಾಂತಿನಗರ ವಿಭಾಗದಲ್ಲಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ ಚಾಲನೆ: ಸ್ವಚ್ಛ ಬೆಂಗಳೂರಿಗೆ ಕರೆ

Share News

ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದಲ್ಲಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಎಂಬ ವಿಶೇಷ ನೈರ್ಮಲ್ಯ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಶಾಂತಿನಗರ ವಿಭಾಗದ ಮುಖ್ಯ ಅಭಿಯಂತರರಾದ ಹೇಮಲತಾ ರವರು ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಛತೆಯ ಮಹತ್ವವನ್ನು ತಿಳಿಸಿದರು.

 

​ಅಭಿಯಾನದ ಪ್ರಮುಖ ವಿವರಗಳು:

​ಆಯೋಜನೆ: ಬೆಂಗಳೂರು ಕೇಂದ್ರ ನಗರ ಪಾಲಿಕೆ (ಶಾಂತಿನಗರ ವಿಭಾಗ).

​ಉದ್ಘಾಟನೆ: ಮುಖ್ಯ ಅಭಿಯಂತರರಾದ ಹೇಮಲತಾ.

​ಧ್ವೇಯೋದ್ದೇಶ: ಸ್ವಚ್ಛ, ಸುಂದರ ಹಾಗೂ ಸಂಪೂರ್ಣ ತ್ಯಾಜ್ಯಮುಕ್ತ ಪರಿಸರ ನಿರ್ಮಾಣ.

 

​ಕಾರ್ಯಪಡೆಯ ಸಕ್ರಿಯ ಭಾಗಿತ್ವ:

​ಅಭಿಯಾನದ ಅಂಗವಾಗಿ ವಿಭಾಗದ ಎಲ್ಲಾ ವಾರ್ಡ್‌ಗಳ ಸಿಲ್ಟ್ (ಹೂಳೆತ್ತುವ) ತಂಡಗಳು, ಟ್ರ್ಯಾಕ್ಟರ್ ತಂಡಗಳು, ಗ್ಯಾಂಗ್‌ಮನ್‌ಗಳು ಹಾಗೂ ನಿಯಂತ್ರಣ ಕೊಠಡಿಯ (Control Room) ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು ಕಸ ತೆರವು ಮತ್ತು ನೈರ್ಮಲ್ಯ ಕಾರ್ಯಗಳನ್ನು ಕೈಗೊಂಡರು.

 

​ಸ್ವಚ್ಛ ಬೆಂಗಳೂರು – ತ್ಯಾಜ್ಯ ಮುಕ್ತ ಬೆಂಗಳೂರು:

ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಈ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಹ ನಗರವನ್ನು ಸ್ವಚ್ಛವಾಗಿಡಲು ಕೈಜೋಡಿಸಬೇಕೆಂದು ಈ ಸಂದರ್ಭದಲ್ಲಿ ಕೋರಲಾಯಿತು.

 


Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin