ಬೆಂಗಳೂರು ಕೇಂದ್ರ ನಗರ ಪಾಲಿಕೆಯ ಶಾಂತಿನಗರ ವಿಭಾಗದಲ್ಲಿ “ತ್ಯಾಜ್ಯದಿಂದ ಸ್ವಾತಂತ್ರ್ಯ” ಎಂಬ ವಿಶೇಷ ನೈರ್ಮಲ್ಯ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಶಾಂತಿನಗರ ವಿಭಾಗದ ಮುಖ್ಯ ಅಭಿಯಂತರರಾದ ಹೇಮಲತಾ ರವರು ಅಭಿಯಾನಕ್ಕೆ ಚಾಲನೆ ನೀಡಿ ಸ್ವಚ್ಛತೆಯ ಮಹತ್ವವನ್ನು ತಿಳಿಸಿದರು.
ಅಭಿಯಾನದ ಪ್ರಮುಖ ವಿವರಗಳು:
ಆಯೋಜನೆ: ಬೆಂಗಳೂರು ಕೇಂದ್ರ ನಗರ ಪಾಲಿಕೆ (ಶಾಂತಿನಗರ ವಿಭಾಗ).
ಉದ್ಘಾಟನೆ: ಮುಖ್ಯ ಅಭಿಯಂತರರಾದ ಹೇಮಲತಾ.
ಧ್ವೇಯೋದ್ದೇಶ: ಸ್ವಚ್ಛ, ಸುಂದರ ಹಾಗೂ ಸಂಪೂರ್ಣ ತ್ಯಾಜ್ಯಮುಕ್ತ ಪರಿಸರ ನಿರ್ಮಾಣ.
ಕಾರ್ಯಪಡೆಯ ಸಕ್ರಿಯ ಭಾಗಿತ್ವ:
ಅಭಿಯಾನದ ಅಂಗವಾಗಿ ವಿಭಾಗದ ಎಲ್ಲಾ ವಾರ್ಡ್ಗಳ ಸಿಲ್ಟ್ (ಹೂಳೆತ್ತುವ) ತಂಡಗಳು, ಟ್ರ್ಯಾಕ್ಟರ್ ತಂಡಗಳು, ಗ್ಯಾಂಗ್ಮನ್ಗಳು ಹಾಗೂ ನಿಯಂತ್ರಣ ಕೊಠಡಿಯ (Control Room) ಸಿಬ್ಬಂದಿ ಸಕ್ರಿಯವಾಗಿ ಪಾಲ್ಗೊಂಡು ಕಸ ತೆರವು ಮತ್ತು ನೈರ್ಮಲ್ಯ ಕಾರ್ಯಗಳನ್ನು ಕೈಗೊಂಡರು.
ಸ್ವಚ್ಛ ಬೆಂಗಳೂರು – ತ್ಯಾಜ್ಯ ಮುಕ್ತ ಬೆಂಗಳೂರು:
ಸಾರ್ವಜನಿಕ ಪ್ರದೇಶಗಳಲ್ಲಿ ತ್ಯಾಜ್ಯ ಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಈ ವಿಶೇಷ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಸಹ ನಗರವನ್ನು ಸ್ವಚ್ಛವಾಗಿಡಲು ಕೈಜೋಡಿಸಬೇಕೆಂದು ಈ ಸಂದರ್ಭದಲ್ಲಿ ಕೋರಲಾಯಿತು.