Police Roundup

2nd PUC Student: ಫಸ್ಟ್​ ಕ್ಲಾಸ್​​ ಬಂದಿದ್ದರೂ ಸಾಕಾಗಲಿಲ್ಲ, ನೊಂದ ವಿದ್ಯಾರ್ಥಿನಿ: ಆ ಒಂದು ಚಾಲೆಂಜ್​​ನಿಂದಾಗಿ ನೇಣಿಗೆ ಶರಣು

Share News

ದ್ವಿತೀಯ ಪಿಯುಸಿಯಲ್ಲಿ ವಿದ್ಯಾರ್ಥಿನಿ ಫಸ್ಟ್​ ಕ್ಲಾಸ್​​ ನಲ್ಲಿ ಪಾಸ್​ ಆಗಿದ್ದಾಳೆ. ಆದರೂ ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಒಂದು ಚಾಲೆಂಜ್​ನಿಂದ ವಿದ್ಯಾರ್ಥಿ ನೇಣಿಗೆ ಶರಣಾಗಿದ್ದಾಳೆ.

 

ಹುಬ್ಬಳ್ಳಿ: ಪಿಯುಸಿ ಫಲಿತಾಂಶ (PUC Result) ಬಂದು ಎರಡು ದಿನಗಳು ಕಳೆದಿದೆ. ಇದೀಗ ಫಲಿತಾಂಶದ (Result) ವಿಚಾರವಾಗಿ ಮತ್ತೊಬ್ಬ ವಿದ್ಯಾರ್ಥಿನಿ (Student) ತನ್ನ ಬದುಕನ್ನೇ ಅಂತ್ಯವಾಗಿಸಿಕೊಂಡು ಘಟನೆ ಬೆಳಕಿಗೆ ಬಂದಿದೆ. ಹೌದು, ಹುಬ್ಬಳ್ಳಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಬಂದ ನಂತರ ತನ್ನ ನಿರೀಕ್ಷೆಗೆ ತಕ್ಕಂತೆ ಬಾರದ ಕಾರಣದಿಂದ 18 ವರ್ಷದ ವಿದ್ಯಾರ್ಥಿನಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಘಟನೆ ಸಿದ್ಧಕಲ್ಯಾಣ ನಗರ, ಉಣಕಲ್‌ನಲ್ಲಿ ನಡೆದಿದೆ.

 

ಶ್ರಾವಣಿ ಮಾರುತಿ ಕಾಳೆ (18) ಎಂಬ ವಿದ್ಯಾರ್ಥಿನಿ ಈ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ತನ್ನ ಕನಕದಾಸ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದ ಶ್ರಾವಣಿ ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಬರೆದಿದ್ದಳು. ಫಸ್ಟ್​ ಕ್ಲಾಸ್​ ಬಂದಿದ್ದಳು. ಆದರೂ ಕೂಡ ಇದು ಸಾಲದೇ ಸಾವಿನ ಮನೆ ಸೇರಿದ್ದಾಳೆ.

ಫಸ್ಟ್​ ಕ್ಲಾಸ್​ ಬಂದಿದ್ದರೂ ವಿದ್ಯಾರ್ಥಿನಿ ಆತ್ಮಹತ್ಯೆ

ಮೃತ ಶ್ರಾವಣಿ ತುಂಬಾ ಚುರುಕಿನ ವಿದ್ಯಾರ್ಥಿನಿ. ಪರೀಕ್ಷೆಗೆ ಮುಂಚೆಯೇ ನಾನು ನೂರಕ್ಕೆ ನೂರು ಪ್ರತಿಶತ ತೆಗೆದುಕೊಳ್ಳುತ್ತೇನೆ ಎಂದು ತನ್ನ ಸ್ನೇಹಿತರೊಂದಿಗೆ ಚಾಲೆಂಜ್ ಮಾಡಿದ್ದಳು. ಅಷ್ಟೇ ಆತ್ಮವಿಶ್ವಾಸದಿಂದ ಪರೀಕ್ಷೆ ಕೂಡ ಬರೆದಿದ್ದಳು. ಆದರೆ ಫಲಿತಾಂಶ ಬಂದಾಗ ಅವಳ ನಿರೀಕ್ಷೆಗೆ ತಕ್ಕಂತೆ ಅಂಕಗಳು ಬಂದಿರಲಿಲ್ಲ. ವಾಣಿಜ್ಯ ವಿಭಾಗದಲ್ಲಿ 78 ಪ್ರತಿಶತ ಅಂಕಗಳು ಬಂದಿದೆ. ಇದು ಅವಳಿಗೆ ಮನಸ್ಸಿಗೆ ಘಾಸಿ ಮಾಡಿದ್ದು, ತನ್ನ ಗುರಿ ತಲುಪಲು ಸಾಧ್ಯವಾಗಲಿಲ್ಲ ಎಂಬ ನಿರಾಶೆಯಲ್ಲಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

Share News

Police Roundup Desk

ತ್ಯಾಗರಾಜ್ ವಿ ಎಸ್, (ಕಳೆದ 27 ವರ್ಷಗಳಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಸುದ್ದಿವಾಹಿನಿಗಳಲ್ಲಿ Investigative Journalist ಆಗಿ ಸೇವೆ ಸಲ್ಲಿಸಿದ ಅನುಭವ.) ಪ್ರಧಾನ ಸಂಪಾದಕರು, ಪೊಲೀಸ್ ರೌಂಡಪ್ News

Leave a Reply

Your email address will not be published. Required fields are marked *

Solverwp- WordPress Theme and Plugin